Kannada Nighantu by Kannada Sahitya Parishattu : Vol-2
“ಕಂಕಣಮೆನೆ ಕಣ‍್ಣಕ‍್ಕುಂ ಕಂಕಣಮೆನಲುದಕಮಕ‍್ಕು ಕಂಕಣಮೆನೆ ಬಿಳಿದಕ‍್ಕುಂ ಕಂಕಣಮೆನೆ ಕಂಬನಿಯುಂ ಕಂಕಣಮೆನೆ ಕಾಂತಿಯಕ‍್ಕು ಶಬ‍್ದಾಗಮದೊಳ್ || ಕಂಕಣಮೆನೆ ನವಿಲಕ‍್ಕುಂ ಕಂಕಣಮೆನೆ ಕಾರ್ಯಮಕ‍್ಕು ಶಬ‍್ದಾಗಮದೊಳ್”
ಬಳೆತೊಟ‍್ಟ ಕೈ; ಕಡಗವಿಟ‍್ಟ ಕೈ; ಮುತ‍್ತಯ‍್ದೆಯ ಚಿಹ‍್ನೆ:
ಕಂಕಣಕೈಯನ‍್ನು ಮೇಲೆ ಮಾಡಿಕೊಂಡು ಆಚಾರ್ಯರ ಪತ‍್ನಿ ಕೊನೆಯ ಯಾತ‍್ರೆಗೆ ಸಿದ‍್ಧಳಾಗಿದ‍್ದಳು
೧. ಮದುವೆ ಮೊದಲಾದ ಮಂಗಳ ಪ‍್ರಸಂಗಗಳಲ‍್ಲಿ ಮುಂಗೈಗೆ ಕಂಕಣವನ‍್ನು ಕಟ‍್ಟು:
ಮನೆಗೊರ್ವ ಮಂಕ ತೊಡರ್ಚಿದ ತನ‍್ನ ಸೋಂಕಲೊಪ‍್ಪುವ ಕಾಂತನವೈವಾಹಕೆ ಕಂಕಣಗಟ‍್ಟೆಂದರಳುತ
೨. (ಆಲಂ) ಪ‍್ರತಿಜ‍್ಞಾಬದ‍್ಧನಾಗು; ಸಂಕಲ‍್ಪಮಾಡು. ಕಂಕಣಕಟ‍್ಟು:
೨. ಭಾರತೀಯ ಸಂಸ‍್ಕೃತಿಯ ಉದ‍್ಧರಣಕ‍್ಕೆ ಶಿವಾಜಿ ಕಂಕಣಕಟ‍್ಟಿದನು
ತಾವು ಕಂಕಣಕಟ‍್ಟಿ ನಿಲ‍್ಲಬೇಕು
ಕಂಕಣಕಟ‍್ಟಿಕೊಳ‍್ಳು = (ಆಲಂ) ದೀಕ‍್ಷೆವಹಿಸು; ಕೆಲಸಕ‍್ಕೆ ಸಿದ‍್ಧವಾಗು.
ಕೂಟಿಗೇರು, ಹುಲಿಗೇರು, ಸಣ‍್ಣ ಹೊಲೆಗಾರ, ಕಂಕಣಗಾಳ
ಕರದ ಕಂಕಣಗೀಲನೊತ‍್ತುವ ಭರದ ನೆವದಿಂ ಪ‍್ರೀತಿಮತಿ ಸೌಂದರಿಯ ಸಾಧ‍್ವಸದೊಡನೆ ಲಜ‍್ಜೆಯನೋಡಿಸಿದ ಕುವರ
೧. ಕಂಕಣವನ‍್ನು ತೊಟ‍್ಟುಕೊಳ‍್ಳು. ೨. (ಆಲಂ) ಪ‍್ರತಿಜ‍್ಞಾಬದ‍್ಧನಾಗು; ಸಂಕಲ‍್ಪ ಮಾಡು:
ನಿಮಗಿರುವ ಒಳ‍್ಳೆಯ ಹೆಸರನ‍್ನು ಅಳಿಸಬೇಕೆಂದೇ ಕಂಕಣತೊಟ‍್ಟಿದ‍್ದಾನೆ