Kannada Nighantu by Kannada Sahitya Parishattu : Vol-4
೧. ಕಜ್ಜಿ ತಿಮರು ಇಸಬು ಗಜಕರ್ಣ ಇಂಥ ರೋಗಗಳು ಆಗುವವು
ತಿಮರು ತುರಿಸಿದರೆ ಅರಸಿನ ಹಾಗೆ
೨. ಸೊಕ್ಕು; ಪೊಗರು; ಗರ್ವ; ಅಹಂಕಾರ:
ತಾನು ಕಲಿತುದನ್ನು 'ತೋರಿಸಿಕೊಳ್ಳಬೇಕು’ ಎಂಬ ತಿಮಿರು ತೀರಿ… 'ತಿಳಿಸಿಕೊಡಬೇಕು’ ಎಂಬ ವಿವೇಕ ಉದಯಿಸಿದಾಗ
೨. ಒಬ್ಬೊಬ್ಬರಿಗೆ ತಿಮುರು ಇಳಿಸಿಬಿಟ್ಟೇನು, ತಿಮುರು
೩. ಸೊಕ್ಕಿದವನು; ಬಲಿಷ್ಠನಾದವನು:
ಒಳ್ಳೇ ತಿಮುರಾಗಿದ್ದ ಮಗ, ಬಲಿಷ್ಠಳಾದ ಮಗಳು, ಆನೆಯಂಥ ಎರಡು ಎತ್ತುಗಳು
[ದೇ.|| ತಮಿ, ಮಲ. ತಿಮಿರ್; ತೆಲು. ತಿಮ್ಮಿರಿ, ತಿಮಿರಿ, ತಿಮುರು]
`ತಿಮಿರಂ ಸಂತಮಸಂ ಧ್ವಾಂತಮಂಧಕಾರಂ ತಮಂ ತಮಿಸ್ರಮದಕ್ಕುಂ`
`ತಿಮಿರಮವನಿಚ್ಛಾಯೆಯಂಧಕಾರಂ… ಧ್ವಾಂತವಮರ್ದ ಕತ್ತಲೆಯೆನಿಕು`
ಭವರೋಗವೆಂಬ ತಿಮಿರ ಹರಿಯದನ್ನಕ್ಕ ಕೂಡಲಸಂಗಯ್ಯನೆತ್ತ ನೀನೆತ್ತ ಮರುಳೆ
ತರಣಿ ಪ್ರಭನರ್ಭಕನೀ ತರುಣಿಯ ಹೃತ್ತಿಮಿರಮಂ ನಿರಾಕರಿಸಿ ಬಹಿಷ್ಕರಿಸಿದನೆನಲೆಸೆಗುಂ ಕುಚಭರ ಚೂಚುಕಯುಗಳ ಕಾಳಿಮಂ ದೇವಕಿಯಾ
ಏಳು ಜನ್ಮದಿಂ ಮಾಡಿರ್ದ ಪಾತಕವು ತರಣಿಯುದಯದ ಮುಂದೆ ನಿಂದ ತಿಮಿರದ ತೆಱದೆ ಹರೆಯುತಿಹುದು