logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಚುರಳಿ
(ನಾ).
ಕಂಚಿನಿಂದ ಮಾಡಿದ ಗುಂಡನೆಯ ಪಾತ‍್ರೆ (ಕಿ).
[ಕಂಚು1 + ಉರಳಿ (<ಉರುಳಿ1)]

ಕಂಚುವಡಿಗ
(ನಾ).
ಕಂಚು, ಹಿತ‍್ತಾಳೆ, ಮೊದಲಾದ ಲೋಹದ ಕೆಲಸಮಾಡುವವನು:
“ಮಾಲೆಯಿಂ ಜೀವಿಸುವಂ, ಮಾಲೆವಡಿಗಂ, ಏವಂ ಕಂಚುವಡಿಗಂ, ಪಱೆವಡಿಗಂ, ಪೂವಡಿಗಂ”
(ಶಬ‍್ದಾನು. ೪೧೬ ಪ‍್ರಯೋ);

ಕಂಚುವಡಿಗ
(ನಾ).
ಮಡಿವಾಳ ಮಾಲೆವೂಗಾಱ ಕುಂಬಾಱ ಕಂಚುವಡಿಗ ಕಮ‍್ಮಱವಟ‍್ಟಿಗರಾ
(ಶ‍್ರೀಪಾಲ. ೧-೭೫).
[ಕಂಚು1 + -ವಡಿಗ]

ಕಂಚುವಱೆ
(ನಾ).
ಕಂಚಿನ ತಮಟೆ; ಕಂಚಿನವಾದ‍್ಯ:
ಮುಟ‍್ಟು ಪಡಂ ಬೆರಸಿರ್ಪೊಡಂ ಪೊಲೆಯರ ದನಿಯಪ‍್ಪೊಡಂ ಕೇಳದಂತು ಕಂಚುವಱೆವೆರಸು ಲೇಸುನುಡಿ ಲೇಸುನುಡಿಯೆಂಬ ಮಹಿಮೆಯಿಂದುಣ‍್ಬರ್
(ಧರ್ಮಾಮೃ. ೯-೧೦೧).
[ಕಂಚು1 + ಪಱೆ1]

ಕಂಚುವಾಳ
ಕಂಚವಾಳ, ಕಂಚಾಲ, ಕಂಚಾಳ, ಕಂಚಿವಾಳ
(ನಾ).
ಒಂದು ಜಾತಿಯ ಮರ:
ತಾರೆಮರವು ನೀಲೀಮರ ಕಂಚುವಾಳದ ಮರ ಯೀ ಮರಗಳು ಭಯಂಕರಗಳಾದ‍್ದರಿಂದ ಉದ‍್ಯಾನಗಳಲ‍್ಲಿ ಹಾಕಬಾರದು
(ಸೌಗಂಧಿ. ೪೨೭-೧೧);

ಕಂಚುವಾಳ
ಕಂಚವಾಳ, ಕಂಚಾಲ, ಕಂಚಾಳ, ಕಂಚಿವಾಳ
(ನಾ).
ಅರಳಿದ ಕಂಚುವಾಳದ ಹೂಗಳಿಂದ ನಗರ ಪ‍್ರಾಂತದ ವನಸ‍್ಥಳಿಗಳು ಹೊಳೆಯುತ‍್ತಿದ‍್ದುವು
(ಬಾಣಆ. ೬೯).

ಕಂಚುವಾಳ
(ನಾ).
ಕಂಚವಾಳ:
“ಮಹಾಪುಷ‍್ಪ – ಕಂಚವಾಳ”
(ಓಷಧಿ. ೧೧೬);

ಕಂಚುವಾಳ
(ನಾ).
ತಲೆಯಂ ಕಟ‍್ಟರೆ ಕಂಚವಾಳ ಮರದೊಳ್ ಶೂದ‍್ರೀಕ ವೀರಾಖ‍್ಯನಂ
(ಸೋಮೇಶ. ೪೨).

ಕಂಚುವಾಳ
(ನಾ).
ಕಂಚಾಲ:
ಕಂಚಾಲ ಕಡವದ ಕಕ‍್ಕೆ ತಂಡಸಲೊಕ‍್ಕಿ ಮಿಂಚುಳ‍್ಳತೇಗು ಚಂದನವು
(ದೇವಾಂಪು. ೬-೨೯೯);

ಕಂಚುವಾಳ
(ನಾ).
ಕಣ‍್ಗೆ ಸೊಕಮನಿತ‍್ತುದು ವನಂ ಯರಯಲವ ಕಂಚಾಲ ಬಕುಳ ನವಿಲಾದಿ ಯರಟಾಳದಿಂಡಂ ಹೊನ‍್ನೆ
(ಪ‍್ರಭುಪು. ೩-೧೨೯).


logo