logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರುಗಾಸ್
ತಿರ್ಗಾಸು:
ತಿರ್ಗಾಸುಗಳು ಹಲವಾರು ಸಿಕ್ಕುತ್ತಿದ್ದವು
(ಪರಾವ. ೧೫೧).
[←ತುಳು. ತಿರ್ಗಾಸ್]

ತಿರುಗಿ
ತಿರುಗ
(ಅ).
೧. ಮತ್ತೆ; ಇನ್ನೊಮ್ಮೆ; ಪುನಃ:
ತಿರುಗಿ ಭೀಮನನೆಚ್ಚನು
(ಕುವ್ಯಾದ್ರೋ. ೧೮-೫೬);

ತಿರುಗಿ
ತಿರುಗಿ ನೀವಿನ್ನೆನ್ನ ದೆಸೆಗುಬ್ಬರದ ಚಿಂತೆಯ ತಾಳದಿರಿ
(ತೊರರಾ. ೨-೪-೪);

ತಿರುಗಿ
ಇಂತು ಜೂಜೊಳು ಸೋತು ತಿರುಗಿನ್ನೆಂತು ರಾಜ್ಯದಿ ನಿಲುವಿರಿ
(ನಳಚ. ೪-೪೦).

ತಿರುಗಿ
೨. ಪ್ರತಿಫಲವಾಗಿ:
ತಿರುಗಿ ಬಯಸದನ ಶಿವಪೂಜೆ ಶಿವನಿಂದ ಹಿರಿದೆಂದು ಅಱಿಗು
(ಸರ್ವಜ್ಞ. ೨೬೩).

ತಿರುಗಿ
ತಿರುಗ:
೧. ಬಾಣಮನ್ನೊಂದನಿವಗಂ ತೊಡಲು ತಿರುಗ ಗತಿ ಬೇರಿಲ್ಲ ನರನಿಗಂ ಮರಣವಾಗಲಿಕ್ಕೆ
(ತುರಂಗ. ೫೭-೫೦);

ತಿರುಗಿ
ಕೆಟ್ಟು ನೆಂಟರ ಸೇರಬೇಡ, ಕೊಟ್ಟ ಧರ್ಮ ತಿರುಗ ಕೇಳಬೇಡ
(ಗಾದೆ).

ತಿರುಗಿ
ತಿರುತಿರುಗಿ
ದ್ವಿರುಕ್ತಿ:
ಸೋಲ್ದೆಱಗಿ ತಿರುತಿರುಗಿ ಬರುತಿರ್ಪ ತುಂಬಿಗಳ ಸಾಲ್
(ಜೈಮಿಭಾ. ೩-೭).
[<ತಿರುಗು1]

ತಿರುಗಿಮುರುಗಿ
ತಿರುಗುಮುರುಗು2’ ನೋ.

ತಿರುಗಿಸು
ತಿರುಗಿಸು
(ಕ್ರಿ).
೧. ಸುತ್ತುವಂತೆ ಮಾಡು; ಸುತ್ತಿಸು; ಅಲೆಸು:
ತನ್ನ ವಿನೋದಕ್ಕೆ ತಾನೇ ತಿರುಗಿಸಿದನನಂತಭವದುಃಖಂಗಳಲ್ಲಿ ಇಂತೆನ್ನ ಚೆನ್ನಮಲ್ಲಿಕಾರ್ಜುನದೇವನೆಂಬ ಪರಶಿವನು
(ಮಹಾದೇ. ಬ. ೨-೪);


logo