logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಚುಗಾಱ
(ನಾ).
ಕಂಚುಗಾರ:
ವಿವಿಧ ಉದ‍್ಯೋಗಗಳನ‍್ನು ಕೈಕೊಂಡ ‘ಪಾಂಚಾಳ’ರು ಇರುವರು. ಇವರಲ‍್ಲಿ ಕೆಲವರು ಕಂಚುಗಾರರಾಗಿರುವರು
(ಕರ್ಣಾಜ. ೯೩).
[ಕಂಚು1 + -ಗಾಱ (<-ಕಾಱ)].

ಕಂಚುಗಾಱಗೇರಿ
(ನಾ).
ಕಂಚುಗಾರರ ಓಣಿ, __ಬೀದಿ:
ಪುಲಿಯಂ ಕಂಡ ಪುಲ‍್ಲೆಯ ಪಿಂಡಿನಂತೆ ಕಂಚುಗಾಱರ್ ಭಯದಿಂ ಮನೆಯಂ ಬಿಟ‍್ಟು ಪೋಗೆ ಕಂಚುಗಾಱಗೇರಿಯಂ ಪೊಕ‍್ಕು
(ಧರ್ಮಾಮೃ. ೨-೨೫).
[ಕಂಚುಗಾಱ + ಕೇರಿ]

ಕಂಚುಗುಳಿ
(ನಾ).
ಕಂಚಿನ ಬಟ‍್ಟಲಿನ ಗುಳಿ:
ಕಂಚುಗುಳಿಯಂತೆ ಹೊಳ‍್ಳೆಗಣ‍್ಣಿದೆ
(ಕರಿಕ. ೮೦-೧೧).
[ಕಂಚು1 + ಕುಳಿ2 (<ಕುೞಿ2)]

ಕಂಚುಗೊರಳ್
(ನಾ).
ಕಂಚಿನಂತೆ ನುಡಿಯುವ ಕಂಠ; ಸ‍್ಪಷ‍್ಟ ಹಾಗೂ ಮಧುರವಾಗಿ ನುಡಿಯುವ ಧ‍್ವನಿ:
ಭಕ‍್ತಿಗೆ ಕೃತಜ‍್ಞತೆಗೆ ಕಂಚುಗೊರಳಂ ಕೊಟ‍್ಟನಿಂತು
(ಶ‍್ರೀರಾಮಾ. ೩೯೨-೮೧೯).
[ಕಂಚು1 + ಕೊರಳ್ (<ಕೊರಲ್)]

ಕಂಚುತನ
(ನಾ).
ಕಂಚಿನ ಗುಣ; ಕಂಚಿನಂತೆ ನಾದ ಹೊರಡಿಸುವ ಗುಣ:
ತಮ‍್ಮ ಶಾರೀರದ ಕಂಚುತನವನ‍್ನೂ ಸೂಕ‍್ಷ‍್ಮತೆಯನ‍್ನೂ ಉಳಿಸಿಕೊಳ‍್ಳಲು ಮಹಾವೈದ‍್ಯನಾಥಅಯ‍್ಯರ್‌ರವರು ಬಹಳ ಎಚ‍್ಚರವಹಿಸುತ‍್ತಿದ‍್ದರು
(ಸಂಗೀತ. ೪)
[ಕಂಚು1 + -ತನ]

ಕಂಚುಪ‍್ರಾಂತಿ
(ನಾ).
ಒಂದು ಬಗೆಯ ಸಸ‍್ಯ:
ಕಂಚುಪ‍್ರಾಂತಿ, ಚಂದಕಲ, ಬಟ‍್ಲಚೆಂದ‍್ರಿಕೆ, ಉಪ‍್ಲಿಗೆ
(ಮೈಔಗಿ. ೫೧-೧೦೩೩).
[?]

ಕಂಚುಮಿಂಚಾಗು
(ಕ‍್ರಿ).
ಮಿಂಚಿನಂತೆ ಹೊಳೆದು ಮಾಯವಾಗು:
ಇಂತಿವೆಲ‍್ಲವೂ ಸಂಚಾರದ ಸಂದೇಹ ಇವಱಲ‍್ಲಿ ಕಂಚುಮಿಂಚಾಗದೆ ಮುಂಚು ಬೇಗ
(ನಗೆಮಾ. ೧೬);

ಕಂಚುಮಿಂಚಾಗು
(ಕ‍್ರಿ).
ಹಿಂಚುಮಿಂಚಿನ ಸವಿ ತೂಗಿ ಕಂಚುಮಿಂಚಾಗಿ ರಾಗಿಸಿದರು ಮೈಗೆ ರೋಮಾಂಚನ ಜುಮ‍್ಮನೇಳ‍್ವಂತೆ
(ಭರಚ. ೧೩-೩೧);

ಕಂಚುಮಿಂಚಾಗು
(ಕ‍್ರಿ).
ಸಂಚಿಯವನಂ ಪೊಂಚಿ ಸದೆದು ಕಂಚುಮಿಂಚಾದರ್
(ಚಿಕವಂ. ೪೫-೨೦);

ಕಂಚುಮಿಂಚಾಗು
(ಕ‍್ರಿ).
ಈ ಪರಿಯಿಂ ಕಂಚುಮಿಂಚಾಗಿ ನುಡಿದಂಗದನ ಪೊಂಗದ ನುಡಿಗಳನಾಲಿಸಿ
(ರಾಮಾಶ‍್ವ. ೧೪೨-೨೧).
[ಕಂಚು1 + ಮಿಂಚು1 + ಆಗು1]


logo