Kannada Nighantu by Kannada Sahitya Parishattu : Vol-4
ಅಲೆದಾಟ; ಸುತ್ತಾಡುವಿಕೆ; ತಿರುಗುವಿಕೆ:
ಹೋದ ಕೆಲಸ ಎಲ್ಲ ಆಯಿತೇ… ಇನ್ನೂ ಉಳಿದಿದೆಯೆ ತಿರುಗಾಟ?
ಮಗ ಮನೆಗೆ ಬಾರದೆ ಎಲ್ಲಿ ತಿರುಗಾಟಕ್ಕೆ ಹೋಗಿದ್ದನೋ
ಅವರು ಇಂಥ ತಿರುಗಾಟಗಳಿಗೆ ಆಳಲ್ಲ
ಅಲೆದಾಡು; ಸಂಚರಿಸು; ಸುತ್ತಾಡು:
ಸುಮ್ಮನೆ ತಿರುಗಾಡಿ ಹೊತ್ತುಗಳೆಯಲಾರೆ
ನೇಮ ಹೆಚ್ಚಿ ಹೋಮ ಮೀರಿ ಶ್ವಾನನ ಹಾಗೆ ತಿರುಗಾಡುವದಾಯಿತು
ಕೆಲವು ಸಾರಿ ತಿರುಗಾಸ್‍ಗಳಲ್ಲಿ ಬಸ್ಸು ಓರೆಯಾದಾಗ ನನ್ನ ಭಾರ ಪಕ್ಕದವರ ಮೇಲೆ ಬೀಳುತ್ತಿತ್ತು
ಮೋಟಾರುಕಾರು ವೇಗವಾಗಿ ಓಡುತ್ತ ಆ ತಿರಗಾಸನ್ನು ಒಂದು ನಿಮಿಷದೊಳಗೆ ದಾಟಿಕೊಂಡು … ಬಹಳ ದೂರವಾಯಿತು