Kannada Nighantu by Kannada Sahitya Parishattu : Vol-4
ಹಾರೆ ಬಿರಿ ಕೊಱಡು ಪೆಟಲ ತಿರುಗು [ಪಾಠಾಂ. ಗ]ಣಿ ಬೀಸುವಲೆ ತಳಿಯಮರದ ಗೊಂದಣದ ಸಂವರಣೆಯಿಂದಾ ಕೋಂಟೆ ಕಣ್ಗೊಪ್ಪಿತು
ಬಲಿವ ಪೆಟಲ ಬೆಣೆ ಡೆಂಕಣಿಗೈ ಪಂದಿದಲೆ ತಿರುಗುಣಿ ಭೀಮಗದೆಯ ಬಲಿದು ಕೆತ್ತುವ ಬಡಗಿಗಳಿಂದಾ ದುರ್ಗ ಸಲೆ ಮೆಱೆದುದು
ಗುಂಡು ಪೆಟಲ ತಿರುಗುಣಿ… ಬಿಲ್ಲಂಬು ಗರಗಸ
ತಿರುಗಣಿಯ ಮಡುವಿನಲ್ಲಿ ಸಿಕ್ಕು ಬೊಗರಿಯಂತೆ ಗಿರಿಗಿರಿ ತಿರುಗಿದಂತೆ ಅವಳಿಗೆ ಭಾಸವಾಯಿತು
[ತಿರುಗು1 +- ಅಣೆ4./ ತಮಿ. ತಿರುಕಣಿ, ತಿರುಕಾಣಿ; ಮಲ, ತಿರುಗಣಿ; ತುಳು. ತಿರುಗಣೆ, ತಿರ್ಗಣೆ, ತಿಂರ್ಗಣೆ]
ತಿರುಗುವ ಕೀಲು; ಸುತ್ತುವ ಕೀಲು:
ಕಾಲಿನ ಇತರ ಭಾಗಗಳು ತಿರುಗಣಿಕೀಲುಗಳಿಂದ ಕೂಡಿವೆ
ಸೀಸದ ಕಡ್ಡಿಯನ್ನು ಒಳಗಿಟ್ಟು ತಿರುಗಿಸಿದಂತೆಲ್ಲ ಹೆರೆಯುವ ಸಾಧನ:
ಇದು ಪೆನ್ಸಿಲು ಕೊಯ್ಯುವ ತಿರುಗಣೆ ಚೂರಿ
ನೀರಿನ ಸುಳಿಗಳುಳ್ಳ ಆಳವಾದ ಪ್ರದೇಶ:
ಇವನು ಬಿದ್ದದ್ದು ತಿರುಗಣೆಮಡುವಿಗೆ
ಅವನು ಸೆಳವಿಗೆ ಸಿಕ್ಕಿ ಹರಿದುಹೋಗಿ ತಿರುಗಣೀ ಮಡುವಿಗೆ ಬಿದ್ದು
ತಿರಿಗಣಿ ಮಡುವಿನಲ್ಲಿ ಸಿಕ್ಕ ನಾವಿನಂತೆ ಚಕ್ಕರ ಹೊಡೆಯಹತ್ತಿತು