Kannada Nighantu by Kannada Sahitya Parishattu : Vol-2
೧. ಕಂಚುಕವನ‍್ನು ತೊಟ‍್ಟುಕೊಂಡ:
ವಿಶ‍್ವದ ಚರಾಚರಂ ರೋಮಾಂಚ ಕಂಚುಕಿತಗಾತ‍್ರಮಪ‍್ಪಂತೆ
ಚತುರವಚನ ರಚನಾ ಪ‍್ರಪಂಚ ಕಂಚುಕಿತ ರೋಮಾಂಚ ಚುಂಚುಸಭಾಜನ ಶರೀರನುಮಪ‍್ಪ ದೂತಮುಖ‍್ಯನನಟ‍್ಟಿ
ಗರುಡ ಚಂಚುವಂ ಕಂಡ ಕಂಚುಕೀಂದ‍್ರನಂತೆಯುಂ ಭಯಂಗೊಂಡು
ಅವರವರ ದಿವ‍್ಯದುಕೂಲ ಕಂಚುಕೆಗಳನು ಸವಿನಯದಿ ನಿರಿಯ ಪಸರಿಸಿಯುಟ‍್ಟು
ಕುಂಚದ ಕಂಚುಗನ‍್ನಡಿಯ ಬಿಜ‍್ಜಣಿಗೆಯ ದೇವಾಂಗನೆಯರ ಗೊಂದಣಂ
(ಕಂಚಿನ) ತಟ‍್ಟೆ ಹಾಗೂ ಪಾತ‍್ರೆಗಳನ‍್ನು ತೊಳೆ:
ಎಸರನಿಡುವಕ‍್ಕಿಗರ್ಚುವ ಬೆಸನಂ ಕೆಯ‍್ಗೆಱೆವ ಕಂಚುಗರ್ಚುವ ಬೆಸನಂ ಬೆಸನಲ‍್ಲದೆ ಮತ‍್ಸ‍್ಯನ ಬಾಣಸಿಗಂಗಾರಿತ‍್ತರೆಲವೊ ನಿನಗೀ ಬೆಸನಂ
[ಕಂಚು1 + ಕರ್ಚು2 (<ಕೞ‍್ಚು)].
ಒಂದು ಬಗೆಯ ಕತ‍್ತಿಯ ವರಸೆ, __ಭಂಗಿ:
ಪಾದಗಳ ತುದಿಗಳಿಂದ ನಿಂತು ದೇಹದ ಯಡಬಲದಲ‍್ಲಿ ತಿರಿಗಿಸುವದೂ ಯಿದು ಕಂಚುಗಾರಗತ‍್ತಿಯೆಂದೂ ಸಮ‍್ಮತವೂ
ಕಂಚು, ಹಿತ‍್ತಾಳೆ ಮೊದಲಾದ ಲೋಹದ ಕೆಲಸ ಮಾಡುವವನು :
“ಲೋಹಕಾರ ನೆನಲ್ ಕಂಚು [ಪಾಠಾಂ. ಚ]ಗಾಱನದಕ‍್ಕು”