Kannada Nighantu by Kannada Sahitya Parishattu : Vol-2
ತರಿಸಿದ ಬಾಣ ತೂಣೀರ ಕಾರ್ಮುಕವ ನೇವರಿಸಿದ ಕಂಚುಕದಳೆದ ಧರಿಸಿದ ಶಂಖಚಕ‍್ರವನಾಕ‍್ಷಣದಲ‍್ಲಿ ಸ‍್ಮರಿಸಿದ ವಿಹಗೇಶ‍್ವರನ
ರಸಮಹಾತ‍್ಮ‍್ಯವ ಕೇಳಿ ಪಡೆಯಲಾ ಲವಲವಿಕೆಯಲಾ ಕಂಚುಕದೋಷವ ಹಸನಾದೌಷಧದಿಂ ಕಳೆಯದೆ ತದ‍್ರಸ ಸಂಸ‍್ಕಾರವಿಶುದ‍್ಧಿಗೆ ಬೀಜವೆನಿಸುವ ಶುಭಪ‍್ರಭೆಯಂ ಕಾಣದೆ
“ಬಳಸು - ಭ‍್ರಮಣ, ಕಂಚುಕಾಂಗಯೋಃ (ಯುದ‍್ಧಕವಚ)”
ಕೆಱಕು ತುಱಿಗ(ಖ)ಜ‍್ಜಿ ಕಂಚುಕಿ ಕುರುವಂಬಳು
೧. ಕಂಚುಕವನ‍್ನು ತೊಟ‍್ಟುಕೊಂಡ.
೨. ಅಂತಃಪುರದ ಅಧಿಕಾರಿ; ರಾಣಿವಾಸದ ಪಾರುಪತ‍್ಯಗಾರ:
ಧವಳ ಕಂಚುಕಾಚ‍್ಛನ‍್ನ ವೃದ‍್ಧಕಂಚುಕೀಜನ ಪರಿವೃತೆಯುಂ
ವೃದ‍್ಧಕಂಚುಕಿ ಸಹಿತಂ ಪುರಪುರಂಧ‍್ರಿಯರುಂ . . . ನಿಂದು
ಅಭಿನವ ರವದ ಕಂಚುಕಿಗಳ ಘಡಾವಣೆಗಳಲಿ ರಾಜಾವಳಿ ಶಿರೋಮಣಿ ಹೊಕ‍್ಕನನುಪಮ ರಾಜಮಂದಿರದ
ಮುದಿಕಂಚುಕಿಯೊಬ‍್ಬನು . . . ಮುಂದೆ ಮುಂದೆ ಹೋದನು
೩. ದ‍್ವಾರಪಾಲಕ. ೪. ಹಾವು; ಸರ್ಪ. ೫. ಕುಪ‍್ಪಸ:
ಮಡದಿಯರಿಗೆ ನಾನು ತೊಡಿಸುವೆ ಕಂಚುಕಿಯ ವುಡಿಸುವೆ ಪೀತಾಂಬರವ