logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರುಕೆ
ತಿರಿಕೆ’ ನೋ.

ತಿರುಕೋಲು
ತಿರುಗೋಲು’ ನೋ.

ತಿರುಗ
ತಿರುಗಿ’ ನೋ.

ತಿರುಗಣಿ
ತಿರುಗಣೆ’ ನೋ.

ತಿರುಗಣಿತಂಬಿಗೆ
(ನಾ).
ತಿರುಪಿನ ಚೆಂಬು: ಸುತ್ತುಗಳನ್ನುಳ್ಳ ಮುಚ್ಚಳದ ಚೆಂಬು; ರೈಲುಚೆಂಬು:
ಏನಾರ ಫರಾಳ ತಂದು ಬಿಡ್ರಿ ಸಾಕು… ಶೇಷಣ್ಣ ತಿರುಗಣಿತಂಬಿಗೆ ತೆಗೆದುಕೊಂಡು ಹೋದ
(ವೈನಿ. ೨).
[ತಿರುಗಣಿ (<ತಿರುಗಣೆ) + ತಂಬಿಗೆ (<ತಂಬುಗೆ)]

ತಿರುಗಣಿಮಡು
ತಿರುಗಣೆಮಡು’ ನೋ.

ತಿರುಗಣೆ
ತಿರುಗಣಿ, ತಿರುಗಾಣಿ, ತಿರುಗುಣಿ
(ನಾ).
೧. ತಿರುಗುವಿಕೆ; ಸುತ್ತಾಟ:
ಸುಳಿಯ ತಿರುಗಣೆಗೆ ಸಿಲುಕಿ ಮಡುವಿನ ಆಳಕ್ಕೆ ಇಳಿದಳು
(ಹುಲಿಹಾ. ೫೪).

ತಿರುಗಣೆ
೨. ಬಾಗು; ತಿರುವು:
ಒಂದು ದೃಷ್ಟಿಯಿಂದ ಈ ತಿರುಗಣೆಯು ಮನೋರಂಜಕವಾಗಿದೆ
(ಸಾಸಮಾ. ೭೦);

ತಿರುಗಣೆ
ರಸ್ತೆ ದಾಟಿ ತಿರುಗಣೆಯ ಬಳಿ ಬಂದೊಡನೆ ಆ ನರಹರಿಯು ಜ್ಞಾಪಕಕ್ಕೆ ಬಂದ
(ಸಾಹೇಬ್. ೬೭).

ತಿರುಗಣೆ
೩. ತಿರುಪು; ಮಲಸೂತ್ರ:
ಸಡಲಿದ ತಿರುಗಣೆಯ ತಿಳಿಯದವಳ ಬಲದ ಕಿವಿಯ ಗಿಳಿಯ ವಾಲೆ ಜಗುಳುವೊಡನೆ ಹೊಳೆಯ ಗುಳುಗುಳೊರೆದುದು
(ಗಿಳಿವಿಂ. ೭೬-೨೪);


logo