logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಚು1
(ನಾ).
ಕಂಚಿನನಾಣ‍್ಯ = ಕಂಚಿನಿಂದ ಮಾಡಿದ ನಾಣ‍್ಯ
(ಪಾರಿನಿ. ೧೭).

ಕಂಚು1
(ನಾ).
ಕಂಚಿನಹಾನೆ = ತುಳುವರ ಶಾಸನಗಳಲ‍್ಲಿ ಬರುವ ನಾಣ‍್ಯ:
ಹಾನೆ, ನಾಡಹಾನೆ, ಕಂಚಿನಹಾನೆ, ಮೂಡೆ
(ತುಳುನಾ. ೨೭೧).
[<ಸಂ. ಕಾಂಸ‍್ಯ]

ಕಂಚು2
(ನಾ).
= ಕಂಚುಕ ೧:
ಮನದೊಳಗೊಸಗೆಯಂ ಶರೀರದೊಳೆತ‍್ತಂ ರೋಮಾಂಚಕಂಚುವಂ[ಪಾಠಾಂ. ಕಂ] ಮದಿರಾಮದವಾಗಿಸೆ ತೆಗೞ‍್ಪನಾಕೆಯ ನುಡಿಯೊಳ್
(ಕವಿರಾ. ೩-೯).
[<ಸಂ. ಕಂಚುಕ]

ಕಂಚುಕ
(ನಾ).
೧. ಕುಪ‍್ಪಸ; ರವಕೆ:
ಪೊಸನೇತ‍್ರದ ಚಂಚತ‍್ಕಂಚುಕ ಮನಿಳಾವಿಳಸತ‍್ಕಾಮಿನಿ ತೊಟ‍್ಟ ಪೋಲ‍್ವೆಯಂ ಪುಟ‍್ಟಿಸುಗುಂ
(ಶಾಂತಿಪು. ೧-೬೦);

ಕಂಚುಕ
(ನಾ).
ಪೊಸಸೀರೆಯಂ ನಿಱಿವಿಡಿದುಟ‍್ಟು ಕಂಚುಕಮಂ ಬಿಗಿದು
(ರಾಮಾಶ‍್ವ. ೧೨೪-೩).

ಕಂಚುಕ
(ನಾ).
೨. ಉದ‍್ದವಾದ ನಿಲುವಂಗಿ:
ಮುಸುಕಿದ ಮೆಯ‍್ಯಿಂ ಗುಲ‍್ಫಾವಸಕ‍್ತಮೆನಿಸಿರ್ದ ರಕ‍್ತನವಕಂಚುಕದಿಂ
(ಕಾದಂಪೂ.೩೯);

ಕಂಚುಕ
(ನಾ).
ಲಂಬ ಕೂರ್ಚಕಲಾಪಂ ತ‍್ವರಿತದಿಮ ಬಂದಂ ಪ‍್ರತೀಹಾರಕಂ
(ಪಂರಾಮಾ. ೨-೨);

ಕಂಚುಕ
(ನಾ).
ಅವನ ಚರ್ಮದ ಕಂಚುಕವನ‍್ನು ತೆಗೆಯಿಸಿ, ಒಳಗೋಣೆಗೆ ಹೋದನು
(ಪುನರು. ೫೧೦).

ಕಂಚುಕ
(ನಾ).
೩. ಹಾವಿನ ಪರೆ; ನಿರ್ಮೋಕ. ‘ಕಂಚುಕಗಳೆ’ ಪರಾ.
[ಸಂ.]

ಕಂಚುಕಗಳೆ
(ಕ‍್ರಿ).
ಪರೆ ಬಿಚ‍್ಚು; ಪರೆಯನ‍್ನು ಕಳೆದುಕೊಳ‍್ಳು:
ಬಳಿಕಲೇವೊಗಳುವೆನು ಕಂಚುಕಗಳೆದ ಕಾಳೋರಗನ ಖಾತಿಯ ಕಳಕಳಕೆ ಮಿಗಲುಗಿದನೊಱೆಯಿಂದುಗ‍್ರಖಂಡೆಯವ
(ತೊರರಾ. ೩-೬-೪೧).
[ಕಂಚುಕ + ಕಳೆ1]


logo