logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

∆ತಿರುಂಪು1
ತಿರಿಪು1’ ನೋ.

∆ತಿರುಂಪು2
ತಿರಿಪು2’ ನೋ.

ತಿರುಕ
ತಿರಿಕ1’ ನೋ.

ತಿರುಕಣಾಮಡೆ
(ನಾ).
ಅಕ್ಕಿ, ತುಪ್ಪ, ಸಕ್ಕರೆ ಹಾಗು ಬಾಳೆ ಹಣ್ಣು ಮುಂತಾದುವುಗಳಿಂದ ಮಾಡುವ ಒಂದು ಬಗೆಯ ಸಿಹಿ ಖಾದ್ಯ:
ನಯಿವೇದ್ಯಕೆ ಹರಿವಾಣ ಯಿಪ್ಪತ್ತಾರೂ ಅಪಪಡಿ ಹರಿವಾಣವೊಂದು ತಿರುಕಣಾಮಡೆ[೧]೧ಕೆ ಯರಡರ ಲೆಖದಲೂ ದೇವರ ನಯಿವೇದ್ಯ ನಡವ ಹಾಗೆ ಕಟ್ಟಳೆಯ ಮಾಡಿದ
(ಸೌಇಇ. IX-ii. ೪೬೨-೩; 1467).
[←ತಮಿ. ತಿರುಕ್ಕಣ್ಣಾಮಟೈ]

ತಿರುಕತನ
(ನಾ).
ತಿರುಪೆ; ಯಾಚಕವೃತ್ತಿ:
ಹೋಗಲಾಡಿಸಿಕೊಂಡು ತಿರುಕತನವನ್ನು ನೀಗಲಾಡಿಸುತ ಮನೆಮುರುಕುತನವನ್ನು
(ಗರಿ. ೪೧-೭).
[ತಿರುಕ (<ತಿರಿಕ1) + - ತನ]

ತಿರುಕಿ
(ನಾ).
ತಿರುಪೆಯವಳು: (ಕಿ).
[ತಿರುಕ (<ತಿರಿಕ1) + - ಇ2]

ತಿರುಕು
(ನಾ).
ತಿರುಪೆ; ಭಿಕ್ಷಾನ್ನ:
ಸಾರ್ವಭೂಪಾಲನ ಸೂನು ಎನಿಸಿದವಗೆ ಸೂಱೆಗೂಳಿನ ತಿರುಕೆ
(ಪುರಂದ. ೧-೫೫-೨).
[ತಿರುಕ (<ತಿರಿಕ1) + - ಉ4]

ತಿರುಕುಳಿ
ತಿರುಕುಳಿ’ ನೋ.

ತಿರುಕುಳಿಗ
(ನಾ).
ಭಿಕ್ಷುಕ:
ದೆಸೆಯನುಟ್ಟ ಬಾಂಬಟ್ಟೆಗೂದಲಿನೊಳಿರುಳಾಳ್ದನಂ ತಳೆದ… ತಿರುಕುಳಿಗನರೆವೆಣ್ಣನು
(ನಂದಿಮಾ. ೨೧-೫೪).
[ತಿರುಕುಳಿ (<ತಿರಿಕುಳಿ) + ಗ2]

ತಿರುಕುಳಿದಾಸ
(ನಾ).
ಭಿಕ್ಷೆ ಬೇಡುವ ದಾಸ: ಭಕ್ತ:
x x ವನಾಥದೇವರಿಗೆ ತಿರುಕುಳಿದಾಸರ ನಂದಾವಗ
(ಎಕ. XIV, ನಾಗಮಂ. ೧೨೬-೮; ?).
[ತಿರುಕುಳಿ (<ತಿರಿಕುಳಿ) + ದಾಸ]


logo