Kannada Nighantu by Kannada Sahitya Parishattu : Vol-2
೧. ತಾಮ‍್ರವೂ ತವರವೂ ಸೇರಿ ಆದ ಮಿಶ‍್ರಲೋಹ:
ಪೊೞಲೊಳಗೊಪ‍್ಪೆ ಕನ‍್ನಡಿಯ ಕಂಚಿನ ತೋರಣದೋಳಿಗಳ್
ಸೋರೆಯ ಬಟ‍್ಟಲಂ ನಂಬಿ ಕಂಚಿನ ಬಟ‍್ಟಲನೊಡೆವ ಗೊರವನುಮಂ
ಕಂಚಿನಿಂದೆ ಭಾಸುರಮಾಗಿ ಸಮೆದ ಕಲಶಂಗಳೊಳ್
ಕಂಚು ಹಿತ‍್ತಾಳೆ ಪ‍್ರತಿಮೆಗಳ ನೆರಹಿ ಮಿಂಚಬೇಕೆಂದು ಬಲುಜ‍್ಯೋತಿಗಳನು ಹಚ‍್ಚಿ
೨. ಕಂಚಿನ ತಟ‍್ಟೆ, __ಹರಿವಾಣ:
ಕುಳ‍್ಳಿರಿಸಿ ಕಂಚನಿಟ‍್ಟು ಬಿಸಿಯಂಬಲಿಂ ಬಡ‍್ಡಿಸಿದೊಡೆ
ಎನ‍್ನ ಹೆಣನ ಮೇಲೆ ಕಂಚಿಟ‍್ಟುಂಡರೆಯೂ ಮಾಣೆ
ಕಱು ತಡೆದತ‍್ತು ಕಂಚನುಣಲೂಮನೆಯೂಕೆಗಳುಯ‍್ದರಕ‍್ಕ
ಕಂಚಿನಕಂಠ = (ಆಲಂ) ಗಡುಸಾದ ಧ‍್ವನಿ; ಸ‍್ಪಷ‍್ಟವಾದ ಧ‍್ವನಿ: