logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಿವೈಸಣಿ
(ನಾ).
(?):
ಶ್ರೀಮಹ ಅಯ್ಯಪರಸನಾ ತಿರಿವೈಸಣಿರ ಮೇಲಿಂಗನಿಗೆ ಹೊಲಗಂದೆಯ ಅಳಿಪಿದವರಿಗೆ… ಪಾಪಕೆ ಹೋಹರು
(ಎಕ. XI, ಹೊಳಲ್ಕೆ. ೧೩೩-೩; ?).
[?]

ತಿರಿಸುತ್ತು
(ನಾ).
ಸುತ್ತಿಕೊಂಡುದು; ತಿರಿಚಿಕೊಂಡುದು:
ಜನ್ನಿವಾರಮಂ ಮೇಲೆತ್ತಿ ತಿರಿಸುತ್ತು [ಪಾಠಾಂ. ತಲೆಸುತ್ತು]ಮಂ ತೆಗೆದು ಸಿಡಿಲಿಸಿ ಧೋತ್ರಮಂ ಚೆನ್ನಾಗಿಯಾಪೋಷಣಮನೆತ್ತಿ ಕುಳ್ಳಿರ್ದು
(ಸಮ್ಯಕೌ. ೭-೨೩).
[ತಿರಿ3 + ಸುತ್ತು2]

ತಿರಿಹು
ತಿರಿಪು1’ ನೋ.

ತಿರೀಟ
(ನಾ).
೧. ಕಿರೀಟ; ಮುಕುಟ:
ಪೊಸತಲರ್ದಲರಂ ತಾಮೆ ಸಾಲ್ವನ್ನೆಗಂ ಸೂಸಿದುವೇಕಾಯ್ತಾ ತಿರೀಟಕ್ಕವನತಿಯೆನೆ ದೇವೋತ್ತಮಾಂಗಂಗಳುಂ ಬಾಗಿದುವು
(ಆದಿಪು. ೭-೩೮);

ತಿರೀಟ
ಛತ್ರತ್ರಯಯುತವಿನಮಿತ ಸುತ್ರಾಮ ತಿರೀಟಮಣಿಗಣಾರ್ಚಿತ ಪದ
(ಜಿನಾಲೆ. ೮).

ತಿರೀಟ
೨. ಲೋಧ್ರದ ಗಿಡ.
[ಸಂ.]

ತಿರು1
ತಿರುವು3’ ನೋ.

ತಿರು2
(ಗು).
ಪೂಜ್ಯವಾದ; ಪವಿತ್ರವಾದ. 'ತಿರುನಕ್ಷತ್ರ’ ಪರಾ.
[< ಸಂ. ಶ್ರೀ./ತಮಿ. ತಿರು]

∆ತಿರುಂಗಿಸು
ತಿರುಗಿಸು’ ನೋ.

∆ತಿರುಂಗು
ತಿರುಗು’ ನೋ.


logo