logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಿಯಂಚ
ತಿರಿಯಂಚಗಳು ಮನವುಳ್ಳುವಿಲ್ಲದುವೆಂದು ಎರಡಂಗವಾದುವು
(ಭರಚ. ೬೭-೧೦೩).
[<ಸಂ. ತಿರ್ಯಂಚ್]

ತಿರಿಯಕ್ಕು
ತಿರಿಕ2
(ನಾ).
೧. ಜೀವನು ಅನುಭವಿಸುವ ನಾಲ್ಕುಗತಿಗಳಲ್ಲಿ ಒಂದು; ತಿರ್ಯಗ್ಗತಿ:
ಪಾಪಿಗಳು ಉರುಳುವರು ತಿರಿಯಕ್ಕುಗಳಲಿ
(ನಿಭಾಗ. ೫-೧೧-೧).

ತಿರಿಯಕ್ಕು
ತಿರಿಕ2:
೧. ತಿರಿಕದೊಳು ಕೆಲರ್ಗೆ ಜಾತಿಸ್ಮರಣಂ ಕೆಲರ್ಗೆ ಧರ್ಮಶ್ರವಣಂ ಕೆಲರ್ಗೆ ಜಿನಮಹಿಮಾದರ್ಶನಮುಂ
(ತಸೂವೃ. ೧೩).

ತಿರಿಯಕ್ಕು
೨. = ತಿರಿಯಂಚ:
ಪಂಚತ್ವಮನೈದಿದ ವಜ್ರಜಂಘಂಗಂ ಶ್ರೀಮತಿಗಮಾ ತಿರಿಕಂ[ಪಾಠಾಂ. ತಿರಿಯಂಚಂ]ಗಳ್ಗಂ… ಉತ್ತರಕುರುವೆಂಬುತ್ತಮಭೋಗ ಭೂಮಿಯೆ ಜನ್ಮಭೂಮಿಯಾದುದು
(ಆದಿಪು. ೫-೨೭ ವ);

ತಿರಿಯಕ್ಕು
ತಿರಿಕನಾರಕಮಾನವಾಮರಲೋಕದೊಳ್ ನೆಲೆಗೊಂಡು ವಿಸ್ತರಿಸದೆಲ್ಲಿಯುಂ
(ಧರ್ಮಾಮೃ. ೧-೬೫);

ತಿರಿಯಕ್ಕು
ಒರ್ವನೆ ನರಕದೊಳಿರ್ದಂದೊರ್ವನೆ ತಿರಿಕಂಗಳಾಗಿ [ಪಾಠಾಂ. ತಿರಿಯಂಚನಾಗಿ, ತಿರ್ಯಂಚನಾಗಿ] ತಿರಿತರುತಿರ್ದಂದು
(ಜೀವಸಂ. ೪೩-೧);

ತಿರಿಯಕ್ಕು
ಸಮ್ಯಗ್ದರ್ಶನಂ ತನ್ನೊಳುಳ್ಳ ಕೃತಾರ್ಥಂ ನರಕಂಬುಗಂ ತಿರಿಕನಾಗಂ
(ಅನಂಪು. ೩-೫೯).
[< ಸಂ. ತಿರ್ಯಕ್]

ತಿರಿಯಙ್ಮುಖ
(ನಾ).
[ನಾಟ್ಯ] ದೇಶೀಯ ಭೌಮಚಾರಿಗಳಲ್ಲಿ ಒಂದು; ವರ್ಧಮಾನಸ್ಥಾನಕದಲ್ಲಿ ನಿಂತುಕೊಂಡು ಬಲಕ್ಕೂ ಎಡಕ್ಕೂ ದ್ರುತಕ್ಕನುಗುಣವಾಗಿ ಜಾಗ್ರತೆ ಚಲಿಸುವುದು:
ಉರು ವರ್ಧಮಾನಮಂ ಪಡೆದೆರಡುಂ ಪದಮೆಯ್ದೆ ನಿಂದು ಬಲನೆಡನಿಂದಂ ತ್ವರಿತದಿ ಚರಿಸಲ್ ಮತ್ತಂ ತಿರಿಯಙ್ಮುಖಚಾರಿಯೆಂಬ ಪೆಸರಂ ಪಡೆಗುಂ
(ಲಾಸ್ಯರಂ. ೬-೬೩).
[< ಸಂ. ತಿರ್ಯಙ್ಮುಖ]

ತಿರಿವು1
ತಿರಿಪು1 ’ ನೋ.

ತಿರಿವು2
ತಿರಿಪು2’ ನೋ.


logo