logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಚಿಗ
(ನಾ).
೨. (ದೇವಾಲಯದ ಸೇವಕರಲ‍್ಲಿ) ಒಂದು ವರ್ಗದ ಹೆಸರು:
ಮಾರ್ತ್ತಾಂಡ ದೇವರ ದೇಗುಲದ ಕುಂಬಾರ ವೆಸನ ಹಡಿ ಸಲಿಸುವ ಕಂಚಿಗಂಗೆ
(ಎಕ. VIII, ಸಾಗರ. ೧೦೯-೬೫; 1079).
[?]

ಕಂಚಿತೋರಣ
(ನಾ).
ಕಂಚಿನ ತೋರಣ:
ಹೆಚ‍್ಚಿನ ಕೊಡದವಳು ಕಂಚಿ ತೋರಣ ಕಟ‍್ಟಿ ರಚ‍್ಚಿಗೆ ಬರಲು ನಾಲ‍್ವರ ಮುಂದಕೆ ಉಚ‍್ಚರಿಸಲೊಶವಲ‍್ಲ ಕೇಳು ಸಜ‍್ಜನ ಸೊಲ‍್ಲ
(ಪುರಂದ. ೧-೩೭-೩).
[<ಸಂ.* ಕಾಂಸ‍್ಯತೋರಣ]

ಕಂಚಿನಮರಲು
(ನಾ).
ಒಂದು ಜಾತಿಯ ಮೀನು (?):
ಕರೀ ಮೀನು, ಗಿಡಪಕ‍್ಕೆ, ಕೊರವ . . . ಹುರವಿನ ಮರಳು, ಕಂಚಿನ ಮರಲು;

ಕಂಚಿನಮರಲು
(ನಾ).
ಬಿಳೀಕೊರವ, ಮರಕೊರವ, ಬಾಳು;

ಕಂಚಿನಮರಲು
(ನಾ).
ಬೇಲಿಕೊರವ
(ನಮ‍್ಮನು. ೨೪೦).
[?]

ಕಂಚಿನಿ
(ನಾ).
ನರ್ತಕಿ; ಕುಣಿತದವಳು (ಕಿ).
[< ಸಂ. ಕಂಜಿನೀ. / ಮರಾ. ಕಂಚನೀ]

ಕಂಚಿನಿಂಬೆ
(ನಾ).
ಈಳೆ ಜಾತಿಗೆ ಸೇರಿದ ಒಂದು ಹುಳಿ ಹಣ‍್ಣು, __ಮರ: “ಜಟಿಲಃ – ಕಂಚಿನಿಂಬೆ, ಹೇರೀಳೆ” (ಓಷಧಿ. ೫೯)
ನಿಂಬೆ ಕಿತ‍್ತೀಳೆ ನಾರಂಗ ಹೇರೀಳೆ ಕಂಚಿನಿಂಬೆ [ಪಾಠಾಂ. ಬಿ]ಯ ಕಾಯ ಕುಸುರೆಗಳನಾ ರಸವೊಡೆಯದಂತೆ ಹುಳಿದೆಗೆದು ಬಟ‍್ಟವಾಲೊಳಗೆ ಪಾಯಸಮಾಳ‍್ಪುದು
(ಸೂಪಶಾ. ೩-೧೦).
[ಕಂಚಿ1 + ನಿಂಬೆ]

ಕಂಚಿಮೇಕೆ
(ನಾ).
೧. ಬಿಳಿ ಬಣ‍್ಣದ ಗಿಡ‍್ಡ ಮೇಕೆ (ಕಿ).

ಕಂಚಿಮೇಕೆ
(ನಾ).
೨. ದೊಡ‍್ಡ ಕೆಚ‍್ಚಲುಳ‍್ಳ ಮೇಕೆ.
[← ತೆಲು. ಕಂಚಿಮೇಕ]

ಕಂಚಿಮೊಗ‍್ಗೆ
(ನಾ).
ಒಂದು ಸಸ‍್ಯ ವಿಶೇಷ:
ಮಸ‍್ಸಿವಾಲ, ಮಸ‍್ಸಿವಾರ, ಕಂಚಿಮೊಗ‍್ಗೆ
(ಮೈಔಗಿ. ೫೩-೧೦೬೧).
[?]


logo