logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಿಪು2
ತಿರುಪು ಹಾಕು =
ಹೆಣೆದುಕೊಳ್ಳು; ಹೊಸೆದುಕೊಳ್ಳು:
ಅನತಿದೂರದಲ್ಲಿ ತಿರುಪು ಹಾಕಿದ, ಹಗ್ಗಗಳಂತೆ ಸುತ್ತಿದ… ಎರಡು ಕೇರೆಹಾವುಗಳ ದೃಶ್ಯ ಕಾಣಿಸಿತು
(ಸ್ವಪ್ನಹೊ. ೨೩೭).
[<ತಿರಿಪು1./ ತಮಿ. ತಿರಿಪು. ತಿರುವು. ತಿರುಪ್ಪ. ತಿರುಪ್ಪಿ; ಮಲ. ತಿರಿಪ್ಪು, ತಿರಿವು; ತುಳು, ತಿರುಪು, ತಿರ್ಪು]

ತಿರಿಪೆ
ತಿರುಪ ’ ನೋ.

ತಿರಿಪ್ಪು
ತಿರಿಪು1' ನೋ.

ತಿರಿಭುವನ
(ನಾ).
ಮೂರು ಲೋಕ:
ಆಕ್ರಮವ ತಿರಿಭುವನ ವಿದ್ಯಾ ಚಕ್ರವರ್ತಿಗಳೆಂದು ನೀವೀ ವಿಕ್ರಮದ ಮಾತಿನಲಿ ಮೇಗರೆ ಮೆಱೆವ ಭಟರುಗಳೆ
(ಕುವ್ಯಾವಿ. ೮-೪೧).
[<ಸಂ. ತ್ರಿಭುವನ]

ತಿರಿಮನೆ
(ನಾ).
(ಕರಾ) ಭತ್ತ ಮುಂತಾದುವನ್ನು ರಕ್ಷಿಸಿ ಇಡಲು ಹುಲ್ಲಿನಿಂದ ಹೊಸೆದು ಮಾಡಿದ ಗೋಪುರಾಕಾರದ ಸಾಧನ.
[ತಿರಿ3 + ಮನೆ]

ತಿರಿಮುರಿ
ತಿರಿಮುರಿವು
(ನಾ).
೧. ತಿರುಗ ಮುರುಗು; ಅಂಕುಡೊಂಕಾಗಿರುವುದು:
ತಮ್ಮ ಕುದುರೆಯ ಚದುರಿನಿಂದ ಕುಣಿಸುತೆಯ್ದುವರು ಅಡ್ಡವಡ್ಡಕೆ ತೆಗೆವರು ತಿರಿಮುರಿಯೆನಲಡ್ಡ ಹರಿವ ಹೊಳೆಯಂತೆ
(ಭರಚ. ೨೩-೨೮).

ತಿರಿಮುರಿ
ತಿರಿಮುರಿವು:
೨. ಮಲ್ಲಯುದ್ಧದ ಒಂದು ವರಸೆ:
ತಿರಿಮುರಿವುಗಳ ಇಕ್ಕಿದರು ಗಳಹತ್ತದಲಿ ಸಲೆ ಮಿಕ್ಕು ಸತ್ರಾಣದಲಿ ಮಂಡಿಗಳ ಮಿಗೆ ಸರಿವೊಕ್ಕು ಹಿಡಿದರು
(ಕುವ್ಯಾಸ. ೨-೯೬).
[ತಿರಿ3 + ಮುರಿ3]

ತಿರಿಮುರಿವು
ತಿರಿಮುರಿ’ ನೋ.

ತಿರಿಯಂಚ
(ನಾ).
ತಿರ್ಯಗ್ಗತಿಯಲ್ಲಿರುವ ಪಶು, ಪಕ್ಷಿ ಮೊದಲಾದ ಪ್ರಾಣಿವರ್ಗ:
ನಾರಕ ನರ ಸುರ ತಿರಿಯಂಚಗತಿ [ಪಾಠಾಂ. ಯಗ್ಗತಿ]ಯೆಂಬ ಚಾರು ಹೆಸರುಗಳ ಪಡೆದು
(ತ್ರಿಪುಸಾಂ. ೫೪);

ತಿರಿಯಂಚ
ಪರಿವ್ರಾಜವಾದದಿ ಸೋಲ್ತು ಸತ್ತಲ್ಲಿಯೇ ತಿರಿಯಂಚವಾಗಿ
(ಶಾಂತೀಚ. ೧-೬೯);


logo