Kannada Nighantu by Kannada Sahitya Parishattu : Vol-4
ಬೆಂದ ಮಡಕೆ ಮರಳಿ ಧರೆಯ ಕೂಡಬಲ್ಲುದೆ
ರಮೆ ಧರೆಯರಿಂದಲಾಲಿಂಗಿತ್ವದಿ ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ ಕಮಲದೊಳಗಿರುವ ಶ್ರೀವಿಜಯವಿಠಲನ ಕಂಡೆ
೬. [ಗಣಿತ] ಒಂದು ಎಂಬ ಸಂಖ್ಯೆಯ ಸಂಕೇತ:
`ಶಶಾಂಕ ಸೋಮಂ… ವಸುಧಾತಳಮಾ ಸಿತಕರ ರಸೆ ಧರೆ ಇಳೆ ರೂಪವೈಕಮೊಂದಱ ನಾಮಂ`
ಗಿರಿ ಗಿಣಿ ದಿವಿಗಿರಿ ಗುಣಿದಿವಿ ಗಿರಿ ಗುಣನಿಕರಂ ಪುರಗಣಿತಂ ಧರೆ ಧರೆ ಧರೆ ಧರೆ ಧರೆ ಧರೆ ಧರೆ ಧರೆ ಧರೆಯಂ ಪರಿಗಣಿತಂ
೭. [ಛಂದ] ಅಕ್ಷರ ಗಣಗಳಲ್ಲಿ ಒಂದು; ಮಗಣ (- - -):
ಆದಿಯ ಮಧ್ಯಾಂತದೆ ಗುರುವಾದೊಡೆ ಶಶಿ ಸೂರ್ಯ ವಾಯು ಗುರುವಿರೆ ಧರೆ ಮತ್ತಾದಿಯ ಮಧ್ಯಾಂತದೆ ಲಘುವಾದೊಡೆ ಜಲ ವಹ್ನಿ ಗಗನ ಲಘುವಿಂ ನಾಕಂ
ಧರೆ ಜಲ ನಿಶಾಕರಂ ಸುರಪುರಗಣಮುಂ ಶುಭಮೆನಿಕ್ಕುಂ