logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಿಪು2
೭. ತಿರುಗಾಟ; ಸುತ್ತಾಟ:
ಉರಗನರಸಿಯ ಕಂಡು ತನ್ನಯ ತಿರುಪ ಮಾಣದೆ ಸೋತು ವೀರ್ಯವ ಸುರಿಸಲು
(ಸಂಭಪ. ೨೬-೩).

ತಿರಿಪು2
೮. ಖಡ್ಗ ಯುದ್ಧದ ಒಂದು ವರಸೆ:
ಮೀಱಿ ತಳಸಂಚದೊಳು ಮೊನೆಯನು ತೋಱಿ ತಿರುಪಿನೊಳಣೆದು ಕಳಚುವರೇಱುಗಾಣದೆ ಮಧ್ಯಸಂಚಕೆ ಸಿಲುಕಿ ಕೈಮಾಡಿ
(ಕುವ್ಯಾಭೀ. ೪-೨೨).

ತಿರಿಪು2
೯. ಒಂದು ಬಗೆಯ ತೆರಿಗೆ (?):
ನಲ್ಲೇರು ನಲ್ಲೆಮ್ಮೆ ಹೊಡಕೆ ತಿರುಪು ಮಗ್ಗ…ಮುಂತಾಗಿ ಯೇನುಳ ಸರ್ವ್ವಸ್ವಾಮ್ಯವನೂ ನೀಉ ಆಗುಮಾಡಿಕೊಂಡು
(ಸೌಇಇ. XI-II, ೪೪೦-೨೫; 1419).

ತಿರಿಪು2
ತಿರುವು2:
೪. ಮೈಯ ನುಲಿವು, ಹೆಜ್ಜೆಯ ಲಘುವು ಕೈಯ ತಿರುವು… ಮನಸ್ಸನ್ನು ಮುತ್ತುತ್ತಿದ್ದಿತು
(ಸವತಿ. ೫).

ತಿರಿಪು2
೬. ಆ ತಿರುವಿನಲ್ಲಿ ಮರದ ಮರೆಯಲ್ಲಿ ಅನತಿದೂರ ಕೆಳಗೆ ಹರಿಯುತ್ತಿತ್ತು ಝರಿ
(ಸಿಡಿಲು. ೮೫);

ತಿರಿಪು2
ಅದರ ತಿರುವೊಂದರಲ್ಲಿ ಎರಡು ಕಾರುಗಳು ಒಂದಕ್ಕೊಂದು ಡಿಕ್ಕಿಹೊಡೆದು
(ಗೋಪುರ. ೮೫).

ತಿರಿಪು2
ತಿರುಹು2:
೧. ಕುಱಿಯನೇಱಿ ಬರುತಿರಲು ನಡುಪಥದಿ ಸಂಧಿಸಿ ತಿರುಹ ಮುರುಹಲು ತೆಱವ ಕಾಣದೆ ಹರಣ ಹವ್ವನೆ ಹಾಱಿ
(ಸಾಳ್ವಭಾ. ೧೭-೭೮).

ತಿರಿಪು2
೪. ಮುರುಹು ತಿರುಹು ಚಾರಿ ಕೈಲಾಗು ನೇವಣೆ ಕರಣ ಭ್ರಮರಿಗಳನಱಿದು ತರುಣಿ ರಂಗಸ್ಥಲದಿ ನರ್ತಿಸಿದಳು
(ಜೀವಂಸಾಂ. ೯-೯೨).

ತಿರಿಪು2
ತಿರುಪಿನ ಚೆಂಬು =
ತಿರುಗಣಿ ಚೆಂಬು; ರೈಲುಚೆಂಬು:
ರೈಲಿಗೆ ಹೊರಡುವಾಗ ಮರೆಯದಂತೆ ತಿರುಪಿನ ಚೆಂಬು ತೆಗೆದುಕೊಂಡು ಹೋಗು
(ರೂಢಿ).

ತಿರಿಪು2
ತಿರುಪಿನ ಬಿಲ್ಲೆ =
ಹೂವಿನ ಆಕಾರದ, ತಿರುಪು ಇರುವ ಆಭರಣ:
ಅವಳು ತುರುಬಿಗೆ ತಿರುಪಿನ ಬಿಲ್ಲೆಯನ್ನು ಹಾಕಿಕೊಂಡಿದ್ದಾಳೆ
(ರೂಢಿ).


logo