Kannada Nighantu by Kannada Sahitya Parishattu : Vol-2
[< ಸಂ. ಕರ್ಕಟ. / ಹಿಂ. ಕಕಡೀ; ಮರಾ. ಕಾಂಕಡೀ]
ಜಯವಧು ಪಂಕಜನಾಭಂಗೆ ಕೂರ್ತು ರಣಮುಖದೆಡೆಯೊಳ್ ಮುಂ ಕೊಟ‍್ಟಿಟ‍್ಟಿದ ರತ‍್ನದ ಕಂಕಣಮೆಂಬಂತೆ ಕೈಗೆವಂದುದು ಚಕ‍್ರಂ
೨. ಉಡಿದಾರ; ಮೇಖಲೆ. ೩. ಕೌಸ‍್ತುಭ. ೪. ಯಾವುದಾದರೂ ಆಭರಣ. ೫. ಭ‍್ರಮಣ; ತಿರುಗುವಿಕೆ; ಸುತ‍್ತುವಿಕೆ. ೬. ಮುಡಿ. ೭. ನೀರಿನ ಕಣ:
ತಾವರೆದೆಱೆದ ಕೈಗಳಿಂ ತುಳುಕಿದರ್ ಚೆಲ‍್ವ ಕಂಕಣರವಂ ಮಿಗೆ ಚೆಲ‍್ವ ಕಂಕಣರವಂಗಳೊಡನೆ
೮. ಕಣ‍್ಣೀರು; ಅಶ‍್ರುಬಿಂದು:
ಪ‍್ರಣುತ ಕಂಕಣ ನಿಕರವದು ತಾಂ ಗಣಿಸುವಡಾನಂದಕರ ಕಾರಣಮೆನಿಸಿದದು ಚೋದ‍್ಯಮೇ
ಅರಸರ್ ಕುಡುವಾಕಾರ್ತಸ‍್ವರ ಕಂಕಣಮಿಕ‍್ಕೆ ಸರಸರಾಸ‍್ವಾದಿಸಿ ಕಾವ‍್ಯರಸವ ಸೂಸುವ ಸುಖ ಭಾಸ‍್ವರಾಶ‍್ರುಕಂಕಣಮೆ ಕವಿಗೆ ಕಂಕಣಮಲ‍್ತೇ
೯. ಕಣ‍್ಣು. ೧೦. ನೀರು. ೧೧. ಬಿಳಿದಾದುದು. ೧೨. ಕಾಂತಿ. ೧೩. ಯುದ‍್ಧ. ೧೪. ನವಿಲು. ೧೫. ಕಾರ್ಯ. ೧೬. (ಮದುವೆಯ ಕಾಲದಲ‍್ಲಿ ವಧೂವರರ) ಮುಂಗೈಗೆ ಕಟ‍್ಟುವ ರಕ‍್ಷಾಸೂತ‍್ರ:
ಮದುವೆ ಕಂಕಣ ಬಿಚ‍್ಚುವವರೆಗೂ ಹೊರಗೆ ಹೋಗಬಾರದು
“ಕೌಸ‍್ತುಭ ಕಣ‍್ಣೀರ್ ತಿರುಗುವ ವಸ‍್ತುಡಿದಾರಗಳು ಕೈಯ ಕಂಕಣವೈದುಂ ಪ‍್ರಸ‍್ತುತ ಕಂಕಣಶಬ‍್ದಂ”
“ಕೌಸ‍್ತುಭಂ ಕಣುನೀರ್ ಭ‍್ರಮಣಂ ಮೇಖಲೆ ಹಸ‍್ತಭೂಷಣಮಿವಿಂತುಂ ಕಂಕಣಾಖ‍್ಯಾನಂ”