logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಚಿ1
ಮಾದಲ ನಿಂಬೆ ದೊಡ‍್ಡಿಲೆ ಕಂಚಿ ಕಿತ‍್ತೀಳೆ ಸ‍್ವಾದು ಖರ್ಜೂರ ದ‍್ರಾಕ‍್ಷೆಗಳು
(ಮೋಹತ. ೨೪-೫೨);

ಕಂಚಿ1
ಕಂಚಿಯಾಲದ ಗಡಣಂ ಕೊಸಗಿಜೆ ಬಸಿಱೇ ಹುಲಗಿಲ್ ಗೊರವಿ
(ಹಮ್ಮೀರ. ೪-೬೮);

ಕಂಚಿ1
ಕಂಚಿಯ ಫಲ ಲೇಸು ಮಿಂಚು ಮುಗಿಲಿಗೆ ಲೇಸು
(ಸರ್ವಜ‍್ಞ. ೧೧೩೮);

ಕಂಚಿ1
ಕಂಚಿಹಣ‍್ಣು ಕಹಿಯೆಂದ ಲಿಂಬೆಹಣ‍್ಣು ಹುಳಿಯೆಂದ
(ಹಳ‍್ಳಿಯ. ೧೦೮).

ಕಂಚಿ1
ಕಂಚಿಕಾಯಿ, ಕಂಚೀಕಾಯಿ = ಕಂಚಿಮರದ ಕಾಯಿ:
ಮಾವಿನಕಾಯಿ, ಕವಳೀಕಾಯಿ, ಕಂಚಿಕಾಯಿಗಳ ಉಪ‍್ಪಿನಕಾಯಿಗಳು ನೋಡುವವರ ಮನಸ‍್ಸನ‍್ನಾಕರ್ಷಿಸುತ‍್ತಿದ‍್ದವು
(ಪುಣ‍್ಯತಿ. ೬);

ಕಂಚಿ1
ಕಂಚೀಕಾಯಿ ಮುಂತಾದವುಗಳ ಚಟ‍್ನಿಯು ಗ‍್ರಾಹಕ
(ಅಷ‍್ಟಾಂಗ. ೧೪೧);

ಕಂಚಿ1
ಸಕ‍್ಕರಿಗಂಚಿ ಕಂಚೀಕಾಯಿ ಎಂಬ ಹೆಸರುಗಳಿವೆ
(ಕೃಷಿಪ‍್ರ. ೧೭೮).
[< ಕಂಚೀಳೆ]

ಕಂಚಿ2
(ನಾ).
(ಕರಾ) ಹುಲ‍್ಲುಚಪ್ಪರದ ಕೆಳಭಾಗದ ಅಂಚು; ಸೂರು:
ಕಂಚಿನೀರು ಇಳಿಯಲಿಲ‍್ಲ ಕೊಡನೀರು ಎಲ‍್ಲಿಂದ ಬರಬೇಕು?
(ರೂಢಿ)

ಕಂಚಿ3
(ನಾ).
(ಕರಾ) ಕಂಚಿನ ಗಿಂಡಿ:
ನೀರನ‍್ನು ಕಂಚಿನಲ‍್ಲಿ ತೆಗೆದುಕೊಂಡು ಬಾ
(ರೂಢಿ).
[?]

ಕಂಚಿ4
(ನಾ).
1. ಕಂಚೀಪಟ‍್ಟಣ; ಕಾಂಚೀಪುರ:
ಕಞ್ಚಿಯಾನ್ ಕೊಣ್ಡು
(ಎಇ. III, ೩೬೦-೩; ೭೪೦).


logo