logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಚಲದೇವಿ
(ನಾ).
ಒಬ‍್ಬಾಕೆಯ ಹೆಸರು:
ನನ‍್ನಿಯ ಗಂಗದೇವನುಂ ಪಟ‍್ಟಮಹಾದೇವಿ ಕಂಚಲದೇವಿಯರುಂ
(ಎಕ. VII, ಶಿವಮೊ. ೪-೯೨; 1122).
[ಕಂಚಲ0 + ದೇವಿ]

ಕಂಚಲು
(ನಾ).
ಕರುವನ‍್ನು ಕಟ‍್ಟುವ ಸ‍್ಥಳ:
ಕೊಳುಂಬನು ಕಂಚಲಿನಿಂದ ಕರುವನ‍್ನು ಬಿಟ‍್ಟ
(ಧೂಮಮ. ೩೦).
[?]

ಕಂಚವಡ‍್ಡ
(ನಾ).
ಒಂದು ಸ‍್ಥಳದ ಹೆಸರು:
ಗಾಉಮಾರರ ಚಉಡಣನ ಕೆಯ‍್ಯಿನ‍್ತೆಂಕಣ ಕಂಚವಡ‍್ಡದ ಮೇರೆ
(ಸೌಇಇ. XI-ii, ೧೭೪-೨೯; 1124).
[ಕಂಚ2 + ?]

ಕಂಚವಾಳ
‘ಕಂಚುವಾಳ’ ನೋ.

ಕಂಚಳವಾೞೆ
(ನಾ).
ಒಂದು ಜಾತಿಯ ಬಾಳೆ:
ಕಾಯ್ ಪೇಱಿದ ತೆಂಗು ತೋರ ಗೊನೆವೇಱಿದ ಕಂಚಳವಾೞೆ ತೋರವಣ‍್ಪೇಱಿದ ಬಕ‍್ಕೆ
(ಅನಂಪು. ೧-೭೮).
[ಕಂಚಳ? + ಬಾೞೆ]

ಕಂಚಳಿಗೆ
(ನಾ).
ಕಂಚಿನ ತಾಳ:
ಕಂಚಳಿಗೆಯ ಸೋಂಕಿನಿಂ ಯೇಕ ದ‍್ವಿ ತ‍್ರಿ ಚತುಸ‍್ಸರ ಪಂಚಸರಗಳೂ
(ಪೂಜ‍್ಯಚ. ೪-೮೭).
[< ಸಂ.* ಕಾಂಸ‍್ಯತಾಲಿಕಾ]

ಕಂಚಾ
(ನಾ).
ಗಜುಗದ ಬೀಜ, ಕಲ‍್ಲು, ಅರಗು ಮೊದಲಾದವುಗಳಿಂದ ಮಾಡಿದ ಗೋಲಿ, __ಗುಂಡು; ಆಟದ ಗೋಲಿ (ಕಿ).
[?]

ಕಂಚಾಲ
‘ಕಂಚುವಾಳ’ ನೋ.

ಕಂಚಾಳ
‘ಕಂಚುವಾಳ’ ನೋ.

ಕಂಚಿ1
(ನಾ).
ಈಳೆ ಜಾತಿಗೆ ಸೇರಿದ ಒಂದು ಹುಳಿ ಹಣ‍್ಣು, __ಮರ; ಹೇರೀಳೆ:
“ಹೇರಿಳೆಯೆನೆ ಕಂಚಿ”
(ಮಂಗರಾ. ೩೪-೧೦);


logo