logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಿಪು1
ತಿಱ್ಚನೆ ತಿರುಹುವೆ ಧರಣಿಯ
(ಮೋಹತ. ೧೨-೧೧).

ತಿರಿಪು1
ತಿರಿತಿರಿಹು
(ದ್ವಿರುಕ್ತಿ):
ಕರ್ಬೊನ್ನ ಸಲಗೆಯೊಳು ಕೆಂಪೊಗೆವಂತೆ ಕೆಂಡದೊಳು ತಿರಿತಿರಿಹಿ ಕಾಸಿ
(ಸೂಪಶಾ. ೪-೮೬).

ತಿರಿಪು1
ತಿರುವಿಹಾಕು:
೧. ಮಗುಚಿಹಾಕು:
ಕಾವಲಿಯ ಮೇಲಿರುವ ದೋಸೆಯನ್ನು ತಿರುವಿಹಾಕು
(ರೂಢಿ).

ತಿರಿಪು1
೨. ಪರಿಶೀಲಿಸು:
ಕೆಲವು ಕಾಗದಪತ್ರಗಳನ್ನೊಮ್ಮೆ ತಿರುವಿ ಹಾಕಿ… ಖೈದಿಗಳನ್ನು ಒಳಗೆ ಕರೆತರಬಹುದೆಂದು ಅಧ್ಯಕ್ಷರು ಆಜ್ಞೆ ಮಾಡಿದರು
(ಪುನರು. ೩೩).

ತಿರಿಪು1
೩. ಮನನಮಾಡು; ಚಿಂತನೆಮಾಡು:
ಅವಳು ಹೇಳಿದುದನ್ನು ಅವನು ಮನಸಿನಲ್ಲೇ ತಿರುವಿಹಾಕುತ್ತಿದ್ದ
(ದೂರಸ. ೪೩).

ತಿರಿಪು1
೪. ಪುನರಾವರ್ತನೆಮಾಡು:
ಪರೀಕ್ಷೆ ಹತ್ತಿರ ಬಂತು. ಎಲ್ಲ ಪಾಠಗಳನ್ನೂ ತಿರುವಿಹಾಕಬೇಕು
(ರೂಢಿ).
[ತಿರಿ1 + - ಪು1./ ತಮಿ. ತಿರುಪ್ಪು, ತಿರುಮ್ಪು; ಮಲ, ತಿರಿ, ತಿರಿಪ್ಪು. ತಿರುಮ್ಬು; ತುಳು. ತಿರ್ಪು; ಕೊಡ. ತಿರ್; ತೆಲು. ತ್ರಿಪ್ಪು; ಕೊಲಾ. ತಿಪ್ಪ್; ನಾಯ್ಕಿ. ತಿಪ್]

ತಿರಿಪು2
ತಿರಿವು2, ತಿರುಂಪು2, ತಿರುಪು2, ತಿರುವು2, ತಿರುಹು2
(ನಾ).
೧. ಸುತ್ತು ತಿರುಗುವಿಕೆ; ಆವರ್ತನೆ:
ಮಹೇಶ್ವರನ ತಿರುಪಿನೊಳುರುಭುಜೋದ್ಭೂತ ವಾಯುವಿಂದ ಚೇಗೆಯಾದುವು ಚರಾಚರವೀಶನಂಗದೊಳು
(ಜೆಬಪು. ೧೨-೨೦).

ತಿರಿಪು2
೨. [ಸಂಗೀತ] ಒಂದು ಬಗೆಯ ಗಮಕ; ಧ್ವನಿಯ ಭೇದ:
ವಳಿ ವಿಳಾಸಂಬಡೆಯೆ ವಹಣಿ ಬಹಳಂಬಡೆಯೆ ತಿರಿಪು ತೊಮ್ಮೆ ವಡೆಯೆ… ಪಾಡುತ್ತಿರೆಯುಂ
(ಶಾಂತೀಶ್ವ. ೧೬-೬೭ ವ).

ತಿರಿಪು2
ತಿರಿವು2:
೩. ಅಲೆದಾಡಿಸುವಿಕೆ; ಸುತ್ತಾಡಿಸುವಿಕೆ; ತಿರುಗಾಡಿಸುವಿಕೆ:
ಕರ್ಮಮೆ ಕಡುಬಲ್ಲಿತ್ತದಱ ತಿರಿವದೇಂ ಬಹುವಿಧಮೋ
(ಆದಿಪು. ೫-೯೭).

ತಿರಿಪು2
∆ತಿರುಂಪು2:
೪. [ನಾಟ್ಯ] ವೃತ್ತಾಕಾರವಾಗಿ ತಿರುಗುವ ಒಂದು ಭಂಗಿ:
ಪಯಪಾಡು ನಿಚ್ಚವಣೆ ಚಾಳೆಯಮುಲ್ಲಾಸಂ ತಿರುಂಪು ತಡವಿತ್ತಡಮುನ್ನಯನ ವಿಶೇಷಂ ಡಿಳ್ಳಾಯಿಯ ಲುಳಿ ಪುದಿದುಸುರಮೆಸೆವಿನಂ ನರ್ತಿಸಿದಳ್
(ಧರ್ಮಪ. ೨-೨೬).


logo