logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಚಗಾಱಬೆಳ‍್ಗಲಿ
ಕಂಚಗಾರಬೆಳ‍್ಗಲಿ
(ನಾ).
ಒಂದು ಊರಿನ ಹೆಸರು:
ಅಗ‍್ರಹಾರತಿಳಕಂ ಸೊಗಯಿಪ‍್ಪುದು ಕಂಚಗಾಱಬೆಳ‍್ಗಲಿ
(ಎಕ. VIII, ಸಾಗರ. ೧೦೯-೨೨; 1042).

ಕಂಚಗಾಱಬೆಳ‍್ಗಲಿ
(ನಾ).
ಕಂಚಗಾರಬೆಳ‍್ಗಲಿ:
ಅಗ‍್ರಹಾರಂ ಕಞ‍್ಚಗಾರಬೆಳ‍್ಗಲಿಯ ಪೂರ್ವ್ವದೆ ಸ‍್ಥಾನಮಾನ‍್ಯಂ
(ಸೌಇಇ. IX-I,, ೭೪-೫; 981).
[ಕಂಚಗಾಱ (<ಕಂಚುಗಾಱ) + ಬೆಳ‍್ಗಲಿ]

ಕಂಚಗಾಱವಸರ
(ನಾ).
೧. ಕಂಚುಗಾರನ ಅಂಗಡಿ. ೨. ಕಂಚುಗಾರರ ಅಂಗಡಿ ಸಾಲು:
ಪುರದೊಳ್ ಬಂದಿರ್ದ ತಾರಾಗಣಂಗಳಿವೆಂ ಬಂತಿರೆ ಕಂಚಗಾಱವಸರಂ ಮಾೞ‍್ಕುಂ ಮನೋರಾಗಮಂ
ಜಗವಿ. ೯-೧೧೦).
[ಕಂಚಗಾಱ (<ಕಂಚುಗಾಱ) + ಪಸರ]

ಕಂಚಗಾಱಿಕೆ
(ನಾ).
ಕಂಚುಗಾರನ ವೃತ‍್ತಿ, __ಉದ‍್ಯೋಗ: ಆಟಕಾಱಿಕೆ, ಓಲೆಕಾಱಿಕೆ, ಕಂಚಗಾಱಿಕೆ, ಬಳೆಗಾಱಿಕೆ (ಶಬ‍್ದಾನು. ೪೩೧ ವ‍್ಯಾಖ‍್ಯಾ).
[ಕಂಚಗಾಱ (<ಕಂಚುಗಾಱ) + -ಇಕೆ]

ಕಂಚಡಿ
(ನಾ).
ಕಚ‍್ಚುಟ; ಕೌಪೀನ:
ಕಾಶಿ ಕಂಚಡಿಯೇಕೆ ಅಸುರದ ಜಡೆಯೇಕೆ ಕೇಶವನು ಕಿತ‍್ತಿಕೊಳಲೇಕೆ ತ‍್ರೈಮಲದ ಆಶೆ ಬಿಡದನಕ
(ಸರ್ವಜ‍್ಞ. ೫೭೭).
[< ಕಚ‍್ಚುಟ]

ಕಂಚಯ
‘ಕಂಚಯ‍್ಯ’ ನೋ.

ಕಂಚಯ‍್ಯ
ಕಂಚಯ
(ನಾ).
ಒಬ‍್ಬಾತನ ಹೆಸರು:
ಶ‍್ರೀ ಕಞ‍್ಚಯ‍್ಯ
(ಎಕ. II, ೪೭೦; 1000).

ಕಂಚಯ‍್ಯ
(ನಾ).
ಕಂಚಯ:
ತಿಳಿವಳ‍್ಳಿಯುತ‍್ತವಸೆಟ‍್ಟಿ ಕಂಚಯನ ಮಲ‍್ಲಿಸೆಟ‍್ಟಿ ದೋಣಿಯಾಕಿಸೆಟ‍್ಟಿ
(ಕಇ. I, ೧೯-೧೨; 1108).
[ಕಂಚ2 + ಅಯ‍್ಯ1]

ಕಂಚರ
(ನಾ).
ನೀರಿನಲ‍್ಲಿ ಚಲಿಸುವಂತಹದು; ಜಲಚರ.
[ಸಂ.]

ಕಂಚರಸ
(ನಾ).
ಒಬ‍್ಬಾತನ ಹೆಸರು:
ಶ‍್ರೀಮತ್ ಕಂಚರಸರ್ ಸೈಗೊಟ‍್ಟ ಗಂಗನಿಂ ಬಂದ ಧರ್ಮಮಂ ಸಮುದ‍್ಧರಿಸಿದಂ
(ಇಆ. XVIII, ೩೧೨-೨೬; 11ನೆಯ ಶತ).
[ಕಂಚ2 + ಅರಸ1]


logo