logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಗೋಲು
(ನಾ).
ಕವೆಗೋಲು:
ಆಕೆ ಹಿಟ‍್ಟಿನ ಕಂಗೋಲಿನಲ‍್ಲಿ ಬೆಕ‍್ಕಿಗೆ ಬಡಿದಳು
(ರೂಢಿ).
[<ಕವೆಗೋಲು?]

ಕಂಚ1
‘ಕಂಚು1’ ನೋ.

ಕಂಚ2
(ನಾ).
ಒಬ‍್ಬಾತನ ಹೆಸರು:
ಆತಂಗೆ ನೆಗಳ‍್ದಿನ‍್ದನಿನ‍್ದಂಗೆ ಸಂದವಾರ್ಯ್ಯಭುಜವೀರ್ಯ್ಯರಪ‍್ಪ ಕವಿಲಾಸನುಂ ಕಂಚನುಂ ಪ‍್ರವೀತಭಯಂ
(ಎಇ. XXVII, ೧೫-೧೩ ; 1114);

ಕಂಚ2
(ನಾ).
ಹಿತ‍್ತಿಲಿಗೆ ಗಡಿ ಮೂಡಲು ಆಡು ಸಾದನ ಮಗ ಕಂಚನ ಹಿತ‍್ತಿಲು ಗಡಿ ತೆಂಕಲು ಹರವರಿಯ
(ಕಇ. I, ೪೧-೪೨; 1417).
[?]

ಕಂಚ3
(ನಾ).
ಸ್ಪರ್ಧೆಯಲ‍್ಲಿ ಮುಟ‍್ಟಬೇಕಾದ ಕೊನೆಯ ಮೆಟ‍್ಟುಗಟ‍್ಟೆ; ಗುರಿ:
ಜನಸಮೂಹವೂ ಜಯಕಾರ ಹಾಕುತ‍್ತ ಬಂಡಿಯನ‍್ನು ಹಿಂಬಾಲಿಸಿತು. ನಂದಿ ಕಂಚವನ‍್ನು ಮುಟ‍್ಟಿದ
(ಬೆಳುಮ. ೧೮೧).
[?].

ಕಂಚಗಾರಬೆಳ‍್ಗಲಿ
‘ಕಂಚಗಾಱಬೆಳ‍್ಗಲಿ’ ನೋ.

ಕಂಚಗಾರ್ತಿ
(ನಾ).
೧. ಕಂಚುಗಾರನ ಹೆಂಡತಿ. ೨. ಕಂಚುಗಾರರ ಹೆಂಗಸು:
ಕಂಚಗಾರ್ತಿ, ಗಾಡಿಗಾರ್ತಿ
(ಶಮದ. ೨೦೮ ಪ‍್ರಯೋ).
[ಕಂಚಗಾಱ (<ಕಂಚುಗಾಱ) + -ತಿ1 (< -ಇತ‍್ತಿ)]

ಕಂಚಗಾಱ
‘ಕಂಚುಗಾಱ’ ನೋ.

ಕಂಚಗಾಱಗಲ್
(ನಾ).
ಒಂದು ಸ‍್ಥಳದ ಹೆಸರು:
ಕಞ‍್ಚಗಾಱಗಲ‍್ಲೆ ಪೊಲ ಎಲ‍್ಲೆ ಪುಣುಸೆಎ
(ಎಇ. XII, ೧೬-೪; 735);

ಕಂಚಗಾಱಗಲ್
(ನಾ).
ಕಡವಿನ ಪುಲ್ ಪದಿಯೆ ಕಞ‍್ಚಗಾಱಗಲ‍್ಲೆ ಪೊಲ ಎಲ‍್ಲೆ ಪುಣುಸೆಎ
(ಎಕ. XII, ಗುಬ‍್ಬಿ. ೬೧-೯೫; 812).
[ಕಂಚಗಾಱ (<ಕಂಚುಗಾಱ) + ಕಲ್3]


logo