Kannada Nighantu by Kannada Sahitya Parishattu : Vol-4
ಕಟ್ಟಿದ ನೂಲ ತೊಂಗಲಂ ತಿರಿಪುವ ಕೆಯ್ತದೊಂದು ನೆವದಿಂ ಲಲಿತಾಂಗಿಯ ಶಂಕೆಯಂ ಭಯಂ ಬೆರಸಿದ ನಾಣುಮಂ ಕ್ರಮದೆ ಪಿಂಗಿಸು
ಅವಂ ತಿರಿಪಿದಂ ನಿಜ ನಿಷ್ಠುರ ಕಾಷ್ಠದಂಡಮಂ
೫. ಹಿಮ್ಮೆಟ್ಟು; ಹಿಂದಿರುಗು:
ಮದಾನ್ಧಸಿನ್ಧುರಂ ತೆಗೆಯಲ್ ಜೈಮಿನಿ ತಿಪ್ಪಿಕೊಣ್ಡು ಪರಿಯಲ್
೧. ಮತ್ತೋರ್ವಂ… ಮುಂಗೆಯ್ಯ ಕಂಕಣಮಂ ತಿರಿಂಪಿ ನೂಂಕುತುಂ ಜಾಱುವಝಳವಟ್ಟಿಗೆಯನೇಱೆ ಸಾರ್ಚುತ್ತುಮೆೞ್ದು
೧. ಧರೆಯುಂ ದಿಕ್ತಟಮುಂ ವಿಯತ್ಪಟಲಮುಂ ಧಾರಾಕರೋತ್ಪಾತದಿಂ ತಿರಿಗುತ್ತಿರ್ಪಿನೆಗಂ ತಿರಿಪ್ಪಿ ಮಧು ಕೋಪಾಟೋಪದಿಂದಿಟ್ಟೊಡೆ
೩. ದನಗಾಹಿಯು ಹುಲ್ಲುಗಾವಲಿನಿಂದ ದನಗಳನ್ನು ಊರ ಕಡೆಗೆ ತಿರಿವಿದನು
೧. ಏಕನಿಷ್ಠೆಯಿಂದ ತಿರಿಹಿ ಮುರಿಹಿ ಹಿಳಿದು ಹಿಂಡಿ
ಅದಱೊಳಗೆ ಮೊಸರ ಸಂಭಾರಮಂ [ಮಿಗೆ] ತಳಿದು ಹದನಱಿದದಂ ತಿರಿಹಿ ತಿರಿಹಿ ಪಾಕವ ಮಾಡಿ
೭. ಮಗುಚಿ ಹಾಕು; ಬುಡಮೇಲುಮಾಡು:
ಸಂಪಳೆಯನು.. ಎಱೆದು ಬೆಂದ ಬಳಿಕಂತದಂ ತಿರಿಹಿ ದೋಸೆಯ ಬೇಯಿಸುವುದು
ಉರಗಕಂಕಣಮಂ ಕಳೆದು ರತ್ನಕಂಕಣಮಂ ತಿರುಂಪಿ