logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಗೇಡು
(ನಾ).
೧. ಕಣ‍್ಣಿನ ಕೇಡು, __ಬಾಧೆ. ೨. ಕಂಗೆಡುವಿಕೆ; ತೊಂದರೆ:
ನರಮೃಗತತಿ ಕಂಗೇಡಿಗೊಳಗಾಗೆ ಬಂದಂ ನೀಡುಂ ನಿಷ‍್ಠುರನಿದಾಘ ರಾಜಂ ತೇಜಂ
(ಹಮ್ಮೀರ. ೪-೬೫);

ಕಂಗೇಡು
(ನಾ).
ದೇವನನು ಕಾಡದಿರು ಕಂಗೇಡು ಮಾಡದಿರು – ಆಡದಿರು ಕಾಡದಿರು!
(ಕ‍್ರೌಂಚಧ‍್ವ. ೫೯).
[ಕಂ. (<ಕಣ್) + ಕೇಡು]

ಕಂಗೊಂಗೆ
‘ಕಂಗುಂಗೆ’ ನೋ.

ಕಂಗೊಗ
‘ಕಂಗುಂಗೆ’ ನೋ.

ಕಂಗೊಳ್
ಕಂಗೊಳು
(ಕ‍್ರಿ).
1. ಕಣ‍್ಣು ತೆರೆದು ನೋಡು:
ಕಾಲಂ ಕಂಗೊಂಡನೆ ಹರಿ ಮೇಲೊಪ‍್ಪುವ ತಲೆಯನಱಸಿ ಕಂಡನೆ
(ಹಮ್ಮೀರ. ೭-೪೪).

ಕಂಗೊಳ್
(ಕ‍್ರಿ).
ಕಂಗೊಳು:
೨. ಕಣ‍್ಣನ‍್ನು ಸೆಳೆ;

ಕಂಗೊಳ್
(ಕ‍್ರಿ).
ಆಕರ್ಷಿಸು: ಲಲನೆಯರೊಳೀ ಚೆಲುವು ವಿದ‍್ಯಾಕಲೆಯಿದಧಿಕವೆನುತ‍್ತರಸ ಕಂಗೊಳುತಿರಲು ಭೂವರನ ನೋಡುತ ಮೂರ್ಛಿಸಿದಳಾಕೆ
(ಸಾಳ‍್ವಭಾ. ೮-೪೨).
[ಕಂ (<ಕಣ್) + ಕೊಳ್1]

ಕಂಗೊಳಿಸು
(ಕ‍್ರಿ).
ಕಣ‍್ಣನ‍್ನು ಆಕರ್ಷಿಸು; ಅಂದವಾಗು; ಶೋಭಿಸು:
ಕಂಗೊಳಿಪ ಮರಕತದ ಕಳಸಂಗಳ ಜಲಮಂ ಸುರಿದರ್
(ಕಾದಂಪೂ. ೭೩);

ಕಂಗೊಳಿಸು
(ಕ‍್ರಿ).
ಪರಮನೆರ್ದೆ ಕಟ‍್ಟನೆ ಕರಗಿ ಮೇಣ್ ಪ‍್ರವಾಹಿತೊಯೆನೆ ಗಂಗೆ ಕಂಗೊಳಿಸಿತು
(ಪದ‍್ಮರಾ. ೧೩-೩೧);

ಕಂಗೊಳಿಸು
(ಕ‍್ರಿ).
ವಿಹಂಗ ಸಂತೋಷದಿ ತಮ‍್ಮ ಮುಂಗಟ‍್ಟಿದ ಮುದ‍್ದುಮಱಿಗಳ‍್ಗೆ ಗುಟುಕೀಯೆ ಕಂಗೊಳಿಸಿತು ರುಕ‍್ಮಿಣಿಗೆ
(ಮೋಹತ. ೪-೧೯);


logo