Kannada Nighantu by Kannada Sahitya Parishattu : Vol-2
೧. ಕಣ‍್ಣಿಲ‍್ಲದವನು; ಕುರುಡ:
ಮುಂತೆ ಕಂಗುರುಡಂಗೆ ಬೆಳಪ ಕಂಗಳನೀಯೆ ಸತ‍್ಪಥದಿ ನಡೆಯದಿಹನೇ
೨. (ಆಲಂ) ಕಣ‍್ಣಿದ‍್ದೂ ಕುರುಡ; ವಿವೇಕವನ‍್ನು ಕಳೆದುಕೊಂಡವನು:
ಅನಿಮಿಷರ ಸಾವಿರವಿಲೋಚನದಮರಪತಿ ಕಂಗುರುಡನಾದನು ಮದದಲಿನ‍್ನುಳಿದವರ ಪಾಡೇನು
ಕಂಗೆಂದಿಬೇರು, ಗಜ‍್ಜುಗದ ಬೇರು
[ಕಂಗೆಂದಿ0 + ಬೇರು (<ಬೇರ್)]
ಫಲುಗುಣನ ಕಂಗೆಡಿಕೆಯನು ಕಂಡಱುಹಲಱಿಯದೆ ಗಹನ ಮಾರ್ಗದಲಿ
ಈಗ ನಾವಿಹ ಮಡುವಿದೆಂದಿಗೆ ಬತ‍್ತುವುದು ಕಂಗೆಡಿಕೆಯೇತಕೆ ಮುಂದೆ ಬಂದುದಕಾಬೆವೆಂದೆನುತ
[ಕಂಗೆಡು (<ಕಣ‍್ಗೆಡು) + -ಇಕೆ]