logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಿತರ್1
ಉಸಿರ ಗಾಳಿಯೊಳ್ ತಿರಿತಂದರ್ ತಱಗೆಲೆವೊಲಮರರಂಬರತಳದೊಳ್
(ಶಾಂತಿಪು. ೧೦-೪೩);

ತಿರಿತರ್1
ಭವಾಂಬುನಿಧಿಯೊಳ್ ತಿರಿತಪ್ಪುವು ಜೀವರಾಶಿಗಳ್
(ಸುಕುಮಾ. ೫-೩೨);

ತಿರಿತರ್1
ಪರದೇಸಿತನದಲಿಯಿದು ತಿರಿತಂದು ಹನುಮಂತದೇವರ ಗುಡಿಗೆ ಕಟು ಪಂಜರವ ಮಾಡಿಸಿ
(ಎಕ. VII, ಚನ್ನಗಿ. ೧೭-೬; 1120 ?).

ತಿರಿತರ್1
೨. ಭಿಕ್ಷೆ ಬೇಡು:
ಪವನಸುತ… ಬಹುಭಿಕ್ಷಭಕ್ಷ್ಯವನವರ ನಾಲ್ವರ ಸರಿಯ ಭಿಕ್ಷವನೊಬ್ಬ ತಿರಿತಹನು
(ಕುವ್ಯಾಆ. ಓರಿಇ. ೨೩-೧೩).

ತಿರಿತರ್1
ತಿರಿತರು:
೨. ಹೇಳಿ ಕೇಳಿ ತಿರಿತಂದು ತಿನ್ನೊ ಜಂಗಮ ನೀನು
(ಜನಜೀ. ೧೫).
[ತಿರಿ1 + ತರ್]

ತಿರಿತರ್2
ತಿಱಿತರ್’ ನೋ.

ತಿರಿತರಿಸು
ತಿಱಿತರಿಸು’ ನೋ.

ತಿರಿತರು
ತಿರಿತರ್ ’ ನೋ.

ತಿರಿತಿನ್
(ಕ್ರಿ).
ತಿರಿದು ತಿನ್ನು; ಭಿಕ್ಷೆಬೇಡಿ ತಿನ್ನು:
ಕುಪ್ರತರ್ಕಿಗನಾವನಾದೊಡೆ… ತಿರಿತಿಂಬಪ್ರಸಿದ್ಧನಶುದ್ಧನಲ್ಲದೆ ಭಕ್ತನೆಂತಹನು
(ಬಸಪು. ೪೩-೬೨).
[ತಿರಿ1 + ತಿನ್]

ತಿರಿದಾನ
(ನಾ).
ಮುಸುಕು; ಆಚ್ಛಾದನ:
ಪೊಂಬಾೞೆಯ ತಿರಿದಾನದಿಂ ಪಾದರಿಯ ಪರ್ಯಂಕದಿಂ… ಶಿಶಿರೋಪಚಾರಮಂ ಮಾಡುತ್ತುಮಿರೆ
(ದಶಕು. ೬-೧೦೭ ವ).
[<ಸಂ. ತಿರೋಧಾನ]


logo