logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಿಚು
ತಿರುಚು1
(ಕ್ರಿ).
ತಿರುಗಿಸು; ತಿರುವು:
ತುಂದಶೂಲೆಯು ಕೆರಳಿಯಲಗ ತಿರಿಚಿದವೊಲಾಗೆ
(ಪ್ರಭುಪು. ೫-೮೩);

ತಿರಿಚು
ಶತ್ರುಗಳ ಮೇಲೆ ಮೀಸೆಯಂ ತಿರಿಚುವ ವೀರನಂದದಿ ಚಾಣಿಕ್ಯನು ಬಿಚ್ಚಿರುವ ತನ್ನ ಜುಟ್ಟಂ ಕೈಯಿಂದ ನೇವರಿಸುತ್ತ ತೆರಳುತ್ತಿರಲು
(ಮುದ್ರಾಮಂ. ೩೫);

ತಿರಿಚು
ರಿಪ್ಪನ ಹೃದಯ ತಿರಿಚಿದಂತಾಗಿ ಕಾಲುಗಳು ಒಂದಕ್ಕೊಂದು ಹೊಡೆಯುವಂತೆ ನಡುಗಿದವು
(ಯೋಧಪು. ೮೨).

ತಿರಿಚು
ತಿರುಚು1:
ಸೆರಗಿನ ತುದಿಯನ್ನು ತಿರುಚೇ ತಿರುಚಿದಳು ಸೀತೆ
(ಮಾಮನೆ. ೨).

ತಿರಿಚು
ತಿರಿಚುಮುರಿಚು =
ವಕ್ರವಾಗಿರುವುದು:
ವೇರದುಖೋವ ತಿರಿಚು ಮುರಿಚುಗತ್ತಿನಿಂದ ಆ ಕೊಟಡಿಯ ಹಿಂದಿನ ಬಾಗಿಲಿಂದ ಒಳಗೆ ಪ್ರವೇಶಿಸಿದಳು
(ಪುನರು. ೨೩೯).

ತಿರಿಚು
ತಿರುಚಿಕೊಳ್ಳು =
ಸುರುಳಿಯಾಗು; ನುಲಿದುಕೊಳ್ಳು:
ದೋರ್ದಿಯಂತೆ (ತೆಂಗಿನ ನಾರಿನ ಹಗ್ಗದಂತೆ) ಯಾಕೆ ತಿರುಚಿಕೊಂದು ಸುತ್ತುತ್ತಿದ್ದೀಯೆ?
(ದಾದಾನ. ೪).
[ತಿರಿ1 + - ಚು1]

ತಿರಿಚೆ
(ನಾ).
೧. (ಆನೆಗೆ ಕಟ್ಟುವ) ಹೊಸೆದ ಹಗ್ಗ:
ಜೊತ್ತೆಗೆ ಜಾನು ವಂಕಣೆ ತಿರಿಚೆ ತೊಡರುರಘಂಟೆಗಳ... ವಿಲಾಸದಿನೆಸೆದುದಾ ದಂತಿ
(ತೊರರಾ. ೬-೨೯-೧೬).

ತಿರಿಚೆ
೨. ಪಿಚಕಾರಿಯಿಂದ ನೀರನ್ನು ಹೊರಪಡಿಸಲು ಒತ್ತುವ ಸಾಧನ:
ನಿಖಿಳರಾಣಿಯರನಂದವನೀಶನು ಅಟ್ಟಿ ಹಿಡಿದಂಡೆಯಿಂ ಹೊಯ್ದು ತಿರಿಚೆಯನೊತ್ತೆ ಹೆಟ್ಟುಗೆಯರೆಲ್ಲ ಮೂದಲಿಸಿ ಮುಮ್ಮಳಿಗೊಂಡು ನೆಟ್ಟೋಟದಿಂದೋಡುವವನಿಪನ ತಮ್ಮಾಣೆಯಿಟ್ಟು ನಿಲಿಸಿದರಾಗಳು
(ಹಚಕಾ. ೩-೫೦).
[<ತಿರಿಚು]

ತಿರಿತರ್1
ತಿರಿತರು
(ಕ್ರಿ).
೧. ಅಲೆದಾಡು; ಸುತ್ತು; ತಿರುಗು:
ತಿರಿತರ್ಕುಮಮಳಜಳನಿಧಿಪರಿಖಾವೃತಭೂಮಿಭಾಗಮಂ
(ಕವಿರಾ. ೩-೫೫);

ತಿರಿತರ್1
ಕೞಲ್ದೆರ್ದೆಗೆಟ್ಟರಣ್ಯದೊಳ್ ತಿರಿತರುತಿರ್ದ ಕಣ್ಬಡಿಗರಿಂ ರಾಜ್ಯದೊಳೇಂ ನೆರೆಯಲ್ಕೆ ತೀರ್ಗುಮೋ
(ಪಂಪಭಾ. ೮-೮೫);


logo