logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಗಾಳಿ
‘ಕಂಗಾಲಿ’ ನೋ.

ಕಂಗಿಡಿ
‘ಕಣ‍್ಗಿಡಿ’ ನೋ.

ಕಂಗಿಡಿಸು
‘ಕಣ‍್ಗೆಡಿಸು’ ನೋ.

ಕಂಗು1
‘ಕರ್ಗು1’ ನೋ.

ಕಂಗು2
‘ಕವುಂಗು’ ನೋ.

ಕಂಗು3
(ನಾ).
ಬರಗು; ನವಣೆ:
“ಕೋರದೂಷಂ ಸ‍್ಯಾಮಕಾಹ‍್ವ ಬರಗುವದಕ‍್ಕುವಂತಾ ಪ‍್ರಿಯಂಗು ಕಂಗು ಸಮಾಖ‍್ಯಂ”
(ವಸ‍್ತುಕೋ. ೯೪-೧೭);

ಕಂಗು3
(ನಾ).
“ಕಂಗುವೆನೆ ನವಣೆ”
(ಮಂಗರಾ. ೧೧೦-೪);

ಕಂಗು3
(ನಾ).
ಚತುಷ‍್ಖಣ‍್ಡುಕ ಬ‍್ರೀಹಿ ಬೀಜವಾಪಮಾತ‍್ರಂ ದ‍್ವಿಖಣ‍್ಡುಕ ಕಂಗುಕ‍್ಷೇತ‍್ರಂ
(ಮೈಆರಿ. ೧೯೪೨, ೩೪-೭೧ ; 9ನೆ ಶತ);

ಕಂಗು3
(ನಾ).
ಪದವೞೆಗಳೊಳ್ ಕಳಮ ಷಷ‍್ಟಿಕಾವ‍್ರೀಹಿ ಯವಯಾವನಾಳ ಗೋಧೂಮ ಕಂಗು . . . ವಿವಿಧ ಧಾನ‍್ಯ ಭೇದಂಗಳುಂ
(ಆದಿಪು. 6-72ವ).
[ಸಂ.]

ಕಂಗು4
(ನಾ).
ಸಣ‍್ಣ ಬೀಜಗಳನ‍್ನು ಬಿಡುವ ಒಂದು ಬಳ‍್ಳಿ:
“ಜ‍್ವಲಿನಿ ಜ‍್ಯೋತಿಷ‍್ಯತಿಯೆನಲ್ ಕಂ[ಪಾಠಾಂ. ಕಾಂ]ಗೆನಿಕ‍್ಕು
ಮಂಗರಾ. ೪೪-೪೪).


logo