Kannada Nighantu by Kannada Sahitya Parishattu : Vol-4
ತಿರಿಕೊರೆ ಕಬ್ಬಿಗಂ ಪಣಮನಾರ್ಜಿಸಲಾರನ್
ಭಿಕ್ಷೆ ಬೇಡು; ಯಾಚಿಸಿ ಪಡೆದುಕೊಳ್ಳು:
ಅರಿದಾದಂ ಕನ್ನಡದೊಳ್ತಿರಿಕೊಱೆಗೊಂಡಱಿಯೆ ಪೇೞ್ವೆನೆಂಬುದಿದಾರ್ಗಂ
[ಜೈನ] ಪಶು, ಪಕ್ಷಿ ಮೊದಲಾದುವುಗಳಿಂದ ತಪಸ್ವಿಗಳಿಗೆ ಉಂಟಾಗುವ ಉಪದ್ರವ,- ತೊಂದರೆ:
ಸೈರಿಸಲುಮಾಗದ ತಿರಿಕೋಪಸರ್ಗಮನವಂತಿ ಸುಕುಮಾರಸ್ವಾಮಿ ಮೂಱು ದಿವಸಮಿರುಳುಂ ಪಗಲುಂ ಸೈರಿಸಿ
ನಿಷ್ಪಂದಶರೀರನಾಗಿ ಮುನಿ ಸೈರಿಸಿದಂ ತಿರಿಕೋಪಸರ್ಗಮಂ
ಕಚ್ಚವಿಯ ಗೆಳೆಯೊಳ್ ಬಿಟ್ಟ ಮತ್ತರ್ಪ್ಪದಿನಯ್ದು ರಟ್ಟಹಳ್ಳಿ ೭೦ ಬಳಿಯ ತಿರಿಗಂಚಿ ೧
(ಎಕ. VII, ಶಿಕಾರಿ. ೧೫೧-೬೩; 1047).
ತನ್ನ ರಕ್ತದ ಕೆಸರಲ್ಲಿ, ಕಣ್ಣು ತುಟಿ ಮೆತ್ತಿಕೊಂಡು, ತಲೆಗೂದಲು ತಿರಿಗಟ್ಟಿ ನರಳುತ್ತ ಬಿದ್ದಿರುವ ಕೌರವ ಸಾರ್ವಭೌಮನನ್ನು ನೋಡಿ ಕಲ್ಲು ಕರಗೀತು
ಭಿಕ್ಷೆ ಬೇಡುವ ಕಷ್ಟ; ಭಿಕ್ಷಾಟನೆಯ ದುಃಖ (?):
ಸಂಸಾರದೊಳಾದ ಬಡತನದ ಕುತ್ತದ ತಿರಿಗುತ್ತದ ರಾಜಬಾಧೆಯ… ಕಂಡು
ಬಾಗಿದ ಕೋಡು; ತಿರುಗಿಕೊಂಡ ಕೋಡು:
ಮುದ್ದಿ ಮಣ್ಣನು ತಂದು ತಿದ್ದಿ ಬಸವನ ಮಾಡಿ ಮುದ್ದುಮುಖ ಚೆಲುವ ತಿರಿಗೊಂಬು ನಂ ಬಸವ ಗದ್ದುಗೆ ಮ್ಯಾಗ ಮಲಗ್ಯಾನ