logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಗಾಲ
(ನಾ).
ಕಂಗಾಲಾಗು = ೧. ಕಂಗೆಡು ; ದಿಕ‍್ಕುಗೆಡು ; ದಂಗುಬಡಿ:
ಅನಿರೀಕ‍್ಷಿತವಾಗಿ ಒದಗಿದ ಉಗ‍್ರಪ‍್ರತಿಭಟನೆಯಿಂದ ಸರ್ಕಾರ ಕಂಗಾಲಾಯಿತು
(ಸ‍್ವಾವೀರ. ೧೦೮);

ಕಂಗಾಲ
(ನಾ).
ಜನರು ಕಂಗಾಲಾಗಿ ಗುಳೇಕಟ‍್ಟಿಕೊಂಡು ಹೋಗಹತ‍್ತಿದರು
(ಚಂದ‍್ರತಾ. ೮).

ಕಂಗಾಲ
(ನಾ).
೨. ಕ‍್ಷೀಣವಾಗು; ದುರ್ಬಲವಾಗು:
ತಂದೆತಾಯಿಗಳು ಈ ಹೊಸ ಕೊರಗಿನಲ‍್ಲಿ ಕಂಗಾಲಾದರು
(ಹಂಗೀತೆ. ೮೭).
[← ಪಾರ. ಮರಾ. ಹಿಂ. ಕಂಗಾಲ]

ಕಂಗಾಲತನ
(ನಾ).
ದರಿದ‍್ರತೆ; ದುರ್ಭಿಕ‍್ಷ; ಹೀನತೆ:
ಈ ಕಂಗಾಲತನಕ‍್ಕಾಗಿ ಗೋವರ್ಧನನ ಒಂದು ಮನಸ‍್ಸು ಒಮ‍್ಮೊಮ‍್ಮೆ ಅವನಿಗೆ ಛೀ ಹಾಕುತ‍್ತಿತ‍್ತು
(ಎರಸೆ. ೧೧೭);

ಕಂಗಾಲತನ
(ನಾ).
ಕಂಗಾಲತನವು ಹೆಚ‍್ಚಾದ ಕಾಲಕ‍್ಕೆ ಅನ‍್ನದ ಕೊರತೆಯನ‍್ನು ತತ‍್ವಜ‍್ಞಾನದ ಬಂಗಾಲಿತನದಿಂದ ಮುಚ‍್ಚಬೇಕಾಗುತ‍್ತದೆ
(ವಿಚಾಮಂ. ೩೪).
[ಕಂಗಾಲ + -ತನ]

ಕಂಗಾಲಿ
ಕಂಗಾಳಿ
(ನಾ).
1. ಬಡತನ; ಕಂಗಾಲತನ (ಕಿ).

ಕಂಗಾಲಿ
ಕಂಗಾಳಿ
(ನಾ).
2. ಬಡವ; ದರಿದ‍್ರ (ಕಿ).

ಕಂಗಾಲಿ
(ನಾ).
ಕಂಗಾಳಿ:
೨. ತೊಲಗಲ‍್ಕೆ ಕಂಗಾಳಿಯಲ‍್ಲಾನು ಬಂದಿರ್ಪ ಕೆಲಸಮದು ಬೇರಿರ್ಪುದು
(ಪರಶು. ೨೭-೯);

ಕಂಗಾಲಿ
(ನಾ).
ದೊಡ‍್ಡಮನೆಯವರಿಗೆ ಮೇಲುಗಡೆಸಾಲಿನಲ‍್ಲಿ ಎಲೇ ಹಾಕಿ, ಕಂಗಾಳಿ ಮುತ‍್ತೈದೆಯರನ‍್ನು ಆಚೆತೊಟ‍್ಟಿಯ ಕೆಳಗಡೆಸಾಲಿನಲ‍್ಲಿ ಕೂರಿಸಿ
(ನೀತಿಚಿಂ. XIV, ೬).
[← ಮರಾ. ಹಿಂ. ಕಂಗಾಲೀ]

ಕಂಗಾಹಿ
(ನಾ).
ಕಣ‍್ಣನ‍್ನು ಕಾಯುವಂಥದು; ರೆಪ‍್ಪೆ:
ಲಜ‍್ಜೆಗಳನುಳಿದು ದಾಹಗೊಂಡಕ‍್ಷಿಗಳು ತ‍್ರಿಜಗನ‍್ಮೋಹನನಮಳಮೂರ್ತಿಯನು ಕಂಗಾಹಿಗಳು ತಾವಾಗಿ ನಿಂದಿರೆ ಕಂಡರಬಲೆಯರು
(ನಿಭಾಗ. ೧೦-೨೦-೧೭).
[ಕಂ. (<ಕಣ್) +ಕಾಹಿ]


logo