Kannada Nighantu by Kannada Sahitya Parishattu : Vol-4
ತಿರಿದು ತಂದ ಅನ್ನ; ಭಿಕ್ಷಾನ್ನ:
ಹರಿಕೀರ್ತನೆಯಂ ಸ್ವರರಾಗತಾಳಲಯಮೂರ್ಛನಾದಿ ವಿಧಿಯಿಂ ಪಾಡೆತೆ ದೈವನ್ಯಸ್ತಭರಂ ತಿರಿಕೂೞಿಂ ಜೀವಿಸುತಿರ್ದಂ
ಆ ತಿರಿಕೊಳ ತೆಲುಂಗರೊಡೆಯನಿಗೆ ಉತ್ತರವೇನು
ಇಱಿದರೆಯು ಏಱಿಲ್ಲ ಹಱಿದರೆಯು ಸೀಳಿಲ್ಲ ತಿರಿಗೂಳ ಕೊಂಡು ಋಣವಿಲ್ಲ
ಭಿಕ್ಷೆಗೆಂದು ತಿರುಗುವಿಕೆ; ಭಿಕ್ಷಾಟನೆ:
`ಭಿಕ್ಷಾ… ಭೈಕ್ಷಂ_ಈ ೬ ತಿರಿಕೆ`
ಕೆಡುವುದೇ ಉದರಾರ್ಥಮಾಗಲು ಬಿಡದೆ ತಿರಿಕೆಗೆ ಹೋಗೆನೆನುವುದು ಮೃಡನಡಿಗಳಂ ನೆನೆವುದರಿದೇ ಕೇರಿ ಕೇರಿಯಲಿ
ತಮ್ಮ ನಿನ್ನಯ ತಿರಿಕೆಗಾವಂಜುವೆವುಯೆಂದರೆ ಮರುತಸುತ ತಾನುಂಬ ಪರಿಯೆಂತೆಂದು ಬೆಸಗೊಂಡ
ತಿರಿಕೆಯ ಕೂಳು ತಿಂದು ಹರಕೆಯ ಕೋಣನಾದ
ಇವರು ಬ್ರಾಹ್ಮಣರ ವೇಷವನ್ನು ಹಾಕಿಕೊಂಡು ತಿರುಕೆಯಿಂದ ಜೀವನ ಮಾಡುತ್ತಾ ಇದ್ದರು
ಭಿಕ್ಷೆ ಬೇಡಲು ತಿರುಗುವಿಕೆ; ಬದುಕಿಗೆ ಯಾಚಿಸುವಿಕೆ. 'ತಿರಿಕೊಱೆಗೊಳ್’ ಪರಾ.