logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಿಕವ್ರಾತ
(ನಾ).
ತಿರ್ಯಗ್ಗತಿಯಲ್ಲಿರುವ ಪ್ರಾಣಿವರ್ಗದ ಗುಂಪು:
ನರಿ ನಾಯ್…. ಕಾಡೆಮ್ಮೆ ಕಾೞ್ಕೋೞಿಯೆಂಬೀ ತಿರಿಕವ್ರಾತಂಗಳೊಳ್ ಸಂಭವಿಸಿ ದುರಿತದಿಂ ದುಃಖಮಂ ಪೇೞಲಾಱೆಂ
(ಧರ್ಮಾಮೃ. ೧೩-೧೫೭).
[ತಿರಿಕ2 (<ತಿರಿಯಕ್ಕು) + ವ್ರಾತ]

ತಿರಿಕುಳಿ
ತಿರುಕುಳಿ
(ನಾ).
೧. ತಿರುಪೆ ಬೇಡುವ ವ್ಯಕ್ತಿ; ಭಿಕ್ಷುಕ:
ತಿರಿಕುಳಿಗಳ ಬರವಂ ಬಯಸಿಯುಂ ಪೆಱರಂ ಬಯಸದರುಂ… ಎನಿಸಿರ್ಪರ್
(ಚಿಕವಿ. ೩-೧೪೩);

ತಿರಿಕುಳಿ
ಬೇಳ್ಪ ತಿರಿಕುಳಿಯಲ್ಲದರ ಚೆಲ್ಲವೆತ್ತನೆಂ
(ಸಂಸಪ. ೨೪-೧೧).

ತಿರಿಕುಳಿ
೨. ದರಿದ್ರ; ಬಡವ; ಭಿಕಾರಿ:
ಮುನ್ನೋಡಲೊಂದು ಗೆಯ್ಮೆಯ ನೋಂಪಿಯೆಸಕಮೊಡರ್ಚೆ ತಿರಿಕುಳಿಯೊಳಮರವೆಂಡಿರ ಭೋಗಮನುಣ್ಗುಂ
(ರಾಮಾಶ್ವ. ೬೮-೧೩).

ತಿರಿಕುಳಿ
ತಿರುಕುಳಿ:
೧. ತಿರುಕುಳಿಗೆ ಮಾನವೆತ್ತಣದು ತೆಗೆ ತಲೆಮಾಲೆಗೊರಲಂಗೆ ಮಹಿಮೆಯೆಲ್ಲಿಯದು
(ಜೆಬಪು. ೧೮-೧೧);

ತಿರಿಕುಳಿ
ನನ್ನದು ತಿರುಕುಳಿ ಬಾಳು
(ಅನಾಥೆ. ೧೭೪).

ತಿರಿಕುಳಿ
೨. ನೀವರಸುಗಳು ತಿರುಕುಳಿಗಳಾವು
(ಕುವ್ಯಾವಿ. ೮-೨೯).

ತಿರಿಕುಳಿ
೩. ತುಚ್ಛನಾದವನು; ಕ್ಷುದ್ರ; ಹೀನ:
ತಿರುಕುಳಿ ಸಿರಂಗರಾಯಂ… ನೆರೆಪಿದ ಪಡೆ ತಾನೇಂ ಪಡಿಬರಿಸುಗುಮೇದೇವರಡಿಯ ಪೞೆಯರ ಪಡೆಯೊಳ್
(ಚಿಕವಿ. ೫-೬೪).

ತಿರಿಕುಳಿ
ತಿಱಿಕುಳಿ’ ಪರಾ.
[ತಿರಿ1 + - ಕುಳಿ3]

ತಿರಿಕೂಳು
ತಿರಿಕೂೞ್ ’ ನೋ.


logo