logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಗಲು
(ನಾ).
ಒಂದು ಆಯುಧ; ಕವಚ (?):
ಸಿಂಗಾಡಿ ತರಕಸ ಕುರುಬಾಣ ಮೊಚ‍್ಚೆಯ ಹೊಂಗೆಲಸದ ಜೋಡು ಸವಗ ಕಂಗಲು ವಜ‍್ರಾಂಗಿ ಕತ‍್ತಿ ನೇಝೆಯಗಳ ವಂಗಡ ಸಿಕ‍್ಕಿತೇನೆಂಬೆ
(ಕುರಾಸಾಂ. ೨೦-೭೮);

ಕಂಗಲು
(ನಾ).
ಒಂದು ಆಯುಧ; ಕವಚ (?):
ಮುಡಿಯಾಭರಣ ಸೀಸಕ ಕಂಗಲು ಮೈದೊಡಿಗೆ ಕಂಗಳೆ ವಾಜಿಗಳು ಕಡೆಗಣ‍್ಣ ಬೆಳಗು ಬಲ‍್ಲೆಹವಾಗೆ ಸತಿಯರು ನಡೆದರು ಹಯಕಾಱರಂತೆ
(ನಾಗಕು. ೪-೪೧).
[<ಸಂ. ಕಂಕಟ, ಕಂಕಟಕ?]

ಕಂಗವಡಿ
(ನಾ).
ಒಂದು ನಾಡಿನ ಅಥವಾ ಊರಿನ ಹೆಸರು:
ಕೈಬಿಸಿದ ಕಾಳೆಗ ಅಣಿಯುಳ್ ಕುದುರೆಯುಳ್ ತಾಗಿ ಪಲರನಿಱಿದು ಸತ‍್ತೊಡೆ ಮೆಚ‍್ಚಿ ಕಙ‍್ಗವಡಿಯಾನ್ ಕಲ‍್ನಾಟು ಕೊಟ‍್ಟದು
(ಎಕ. X, ಮುಳಬಾ. ೨೨೮-೮; 890).
[< ಗಂಗವಾಡಿ?]

ಕಂಗಳ
(ನಾ).
ಕಣ‍್ಣಿಲ‍್ಲದವನು; ಕುರುಡ:
ಕಂಗಳಯ‍್ಯಂಗೆ ಮಣಿಮುಕುರವ ತೋಱೆ ಕಾಣ‍್ಬನೆ ತನ‍್ನ ಪ‍್ರತ‍್ಯಂಗವ
(ಆದವ. ಉ. ೮೩-೧೩೭);

ಕಂಗಳ
(ನಾ).
ಕಂಗಳನ ಕೋಲು ಕಳೆದಂತೆ
(ಸರ್ವಜ‍್ಞ. ೧೫೩೭);

ಕಂಗಳ
(ನಾ).
ಗಾಳಿ ಬೆಮರ್ತಂದು ನೇಸಱ್ ಕಂಗಳನಾದಂದು
(ರಾಮಾಶ‍್ವ. ೧೧-೨೯);

ಕಂಗಳ
(ನಾ).
ಕಂಗಳನಿಗೆ ಅಗ‍್ನಿ ಸ‍್ತಂಭನಸಿದ‍್ಧನಿಗೆ ಆಮಾತು
(ಬೆಟ‍್ಟ. ೨೧೪-೧೬);

ಕಂಗಳ
(ನಾ).
ಕಂಗಳರ ಜಂಗುಳಿಯ ಪ‍್ರತ‍್ಯಯಕೆ ತಂದೆಯೋ
(ಗರಿ. ೧೭-೧೦).
[ಕಂ (< ಕಣ್) + ಕಳೆ2 (<ಕೞಿ1) + -ಅ7]

ಕಂಗಱುಬು
‘ಕಣ‍್ಗಱುಬು’ ನೋ.

ಕಂಗಾಗು
(ಕ‍್ರಿ).
ಸಿಟ‍್ಟಿಗೇಳು; ರೇಗು; ವ‍್ಯಗ‍್ರವಾಗು; ಸಿಡಿಮಿಡಿಗೊಳ‍್ಳು (ಕಿ).
[ಕಂಗು5 + ಆಗು1].


logo