Kannada Nighantu by Kannada Sahitya Parishattu : Vol-2
ದನಿದೋಱೆ ಕತ‍್ತರಿ ಮೊನೆಗೊಂಡ ಕಿವಿಯಿಂ ಕೆಕ‍್ಕಳಿಸುವ ದೃಷ‍್ಟಿಯಿಂ ಕಂಗನೆ ಕನಲ‍್ದು
ಭಗದತ‍್ತನ ಧನುವನಿಕ‍್ಕಡಿಗಡಿಯೆ ಕಂಗನೆ ಕನಲಿ ಗವಸಣಿಗೆಯಿಂದುಗಿದನು ನಿಜಾಯುಧವ
ಕಂಗನೆಕನಲ್, ಕಂಗನೆಗನಲು = ಹೆಚ‍್ಚಾಗಿ ಕೋಪಗೊಳ‍್ಳು:
ಸುರತಸುಖಸುಧಾ ಸೇವನೆಗೆ ವಿಘ‍್ನಕಾರಿಯೆನಿಪ ಸೂರ್ಯೋದಯಕ‍್ಕೆ ಕಂಗನೆಕನಲ‍್ದು
ಕವಿದುದು ಸೇನೆ ಕಂಗನೆಗನಲಿ ಕರ್ಣ ದ‍್ರೋಣರಿಗೆ
ಚೋಳಧನಞ‍್ಜಯನ್ ಎರಿಗಾಲ‍್ವಾದಿ ಅಱುನೂಱು ಆಳೆ ಕಂಗಪಾದಿ ಕೊಟ‍್ಟವಳ‍್ಳಿಪಾದಿ ವಲ‍್ಲಭ ಪಾದಿಯು ಮೂಱುಪಾದಿ ವಲವರ್ಮ್ಮನಾಮೇಕೆ ಮ x x x x ಧೊಕ‍್ಕೆಯ‍್ದನ‍್ದು ಕನ‍್ದಕೊತ‍್ತರ ಶ‍್ರೀರಾಮನ್ . . . ವೀರಸ್ವರ್ಗಂ ಪೊಕ‍್ಕನ್
(ಎಕ. XII, ಮದ‍್ದಗಿ, ೯೩-೧; 750).
ಕುಲಬ‍್ರಹ‍್ಮಣರ್ ಕ್ಕಂಗಮಂಗಲವರ್ಕ್ಕೆ ಕೊಣ‍್ಣಿನ‍್ದ ನಾಮ ಗೋತ‍್ರಸ‍್ಯ
ಕಂಗಲಿಂಡಿಗ ನಾೞ್ಕೆವುಣ‍್ಣುಗೆಯ‍್ಯೆ
(ಎಕ. VIII, ಸೊರಬ. ೨೪೦-೫; 950).
ಜಡೆಯ ಗೊಂಡೆಯ ಕಂಗಲ ಜೋಡು ಕಟ‍್ಟಿದ ಕಡಿದಬ‍್ಬೆ ಕಯ‍್ಯ ಸಿಂಗಾಡಿ ತೊಡೆಯ ಬಲ‍್ಲೆಹ ಮಿಗೆ ಮೆಱೆಯಲೆಯ‍್ತಂದರಂದೊಡನೆ ತುರುಕರಾವುತರು
ದಶರಥಿ ಜವದಾಡೆ ಕಡಿದಾಬೆ ಕಾಲಕುಪ‍್ಪಸ ಕಂಗಲು ಠೌಳಿ ಸವಗ ಎಸೆಯೆ ರಣದೊಳೆಸೆದರು