Kannada Nighantu by Kannada Sahitya Parishattu : Vol-4
೧. ತಿರುಗುವವನು; ಅಲೆದಾಡುವವನು; ಸುತ್ತುವವನು:
ತ್ರಿಜಗದ ತಿರಿಕಂ ವಿದ್ಯಾಭಿಜಾತಗಂಧಂ
ತಿರ್ಯಗ್ಗತಿಯೊಳ್ ತಿರಿಕರ್ಗೆ ಮಿಥ್ಯಾದೃಷ್ಟ್ಯಾದಿ ಸಂಯತಾಸಂಯತ ಗುಣಸ್ಥಾನಂಬರಂ ಸಾಮಾನ್ಯೋಕ್ತಭಾವಂ
೨. ಭಿಕ್ಷುಕ; ತಿರುಪೆ ಎತ್ತುವವನು:
ಸಂದ ತಿರಿಕಂಗೆ ತೊವೆ ತುಪ್ಪಂ ದೊರೆಕೊಳಲುಣ್ಮಿ ನಲಿವ ತೆಱದಿಂ… ರೌರವದಿಂದಂ ಬಂದಂಗೆ ಮೋಹಮಕ್ಕುಂ ಸಿರಿಯೊಳ್
ಮಸಣದ ದೇವನು ಮಾರಿಯ ದೇವನು… ತಿರಿ [ಪಾಠಾಂ. ರು]ಕ ಗೊರವನೆಂದು ಅಲ್ಲಲ್ಲಿ ಒಂದೊಂದನಾಡುತ್ತಿಪ್ಪರಯ್ಯ
ಹೊನ್ನರಾಶಿಯ ಪುರದೊಳಿಹ ಬಡವರಿಗೆ ತಿರಿಕರಿಗೆರೆವರ್ಗೆ ವೆಚ್ಚಿಸು ಹೋಗು
ತಿರಿಕನನು ಕರತಂದು ಧರಣಿಯ ಚರಿತದೊಳಗಿರಿಸಿದರೆ ಮರ್ಕಟ ಸೆರೆಯ ಸೇವಿಸಿದಂತೆ
೨. ತಂಗಿಯ ತಿರುಕಗಿತ್ತಿರೆ ಮಱೆದು