logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಿ1
ತಿರಿದುಣ್ =
ಭಿಕ್ಷೆಬೇಡಿ ತಿನ್ನು; ಯಾಚಿಸಿ ಹೊಟ್ಟೆಹೊರೆ:
ತಿರಿದುಂಡಂದಲ್ಲದೆ ಮೆಯ್ಮಣಿಯದು ಸಂದೆಯಮಿನ್ನೇಕೆ
(ಧರ್ಮಾಮೃ. ೧೩-೪೬);

ತಿರಿ1
ತಿರಿದುಂಬ ಮಾರಯ್ಯ ಬೀರಯ್ಯ… ಕೇತಯ್ಯಗಳೆಂಬ ನೂಱು ಮಡಕೆಗೆ… ದೇವ ಶರಣೆಂಬುದೊಂದು ದಡಿ ಸಾಲದೆ
(ಬಸವ. ೫೫೨);

ತಿರಿ1
ಪರಿಪರಿಯಲಿ ಹಿರಿಯರ ದೂಷಿಸುವವ ತಿರಿದುಂಬುವುದೆ ಸಾಕ್ಷಿ
(ಪುರಂದ. ೨-೧೭-೭);

ತಿರಿ1
ಹಂಚನೆ ಹಿಡಿದು ತಿರಿದುಂಬ ಜ್ಞಾನಿ ತಾ ಹಂಚುಹಱಿಯಹನು
(ಸರ್ವಜ್ಞ. ೩೪೮);

ತಿರಿ1
ಹರಸೋದು ತಪ್ಪೋದಿಲ್ಲ ತಿರಿದುಂಬುವದು ಹೋಗೋದಿಲ್ಲ
(ಗಾದೆ).

ತಿರಿ1
ತಿರಿದುಣಿಸು =
ತಿರಿಯುವಂತೆ ಮಾಡು; ಭಿಕ್ಷೆಬೇಡಿಸು:
ಈಶಾನ್ಯನ ನಿಳೆಯೊಳು ತಿರಿದುಣಿಸಿದನದಟಿಂದ
(ತ್ರಿಪುಸಾಂ. ೬-೬೬).
[ದೇ. || ತಮಿ. ಮಲ. ತುಳು. ತೆಲು. ತಿರಿ]

ತಿರಿ2
ತಿಱಿ’ ನೋ.

ತಿರಿ3
(ನಾ).
೧. ಹೊಸೆದುದು; ಹುರಿಮಾಡಿದುದು:
ಜಟಾ, ಸಟಾ… ೨ ವ್ರತನಿಯಮವುಳ್ಳವರ ಜಡೆಗಳ ಹೆಸರು, ಮಣುಕು ಕೂದಲು, ಜಡೆತಿರಿಗಳು
(ಸಿದ್ದಾಂತಿ. ೧೭೧).

ತಿರಿ3
೨. (ಕರಾ) ಕಾಳು, ಬತ್ತ ಮುಂತಾದುವನ್ನು ರಕ್ಷಿಸಿ ಇಡಲು ಹುಲ್ಲಿನಿಂದ ಹೊಸೆದು ಮಾಡಿದ ಸಾಧನ:
ಕೊಯಿಲು ಮುಗಿಯಿತು; ಬತ್ತ ಚಾವಡಿಯಲ್ಲಿ ರಾಶಿಗೊಂಡಿತು; ತಿರಿಯ ಕೆಲಸವಾಯಿತು
(ನಂಬಿನಾ. ೫೯).

ತಿರಿ3
ತಿರಿಮನೆ’ ಪರಾ.
[<ತಿರಿ1]


logo