Kannada Nighantu by Kannada Sahitya Parishattu : Vol-4
ನಿಂದೆಗೊಳಗಾದವಳು; ತಿರಸ್ಕರಿಸಲ್ಪಟ್ಟವಳು:
ಕೈಕೆಯುಂ ನರ ತಿರಸ್ಕೃತೆ ವಿಕೃತ ಮಂಥರಾದಾಸಿಯಂ... ಪ್ರೀತಿಸುತೆ
ಮಧ್ಯಸ್ಥ; ತೀರ್ಪುಗಾರ; "ಹಿರಿಯ, ತೀರ್ಪುಕೊಡುವವ, ನ್ಯಾಯಾಧೀಶ"
(ಜಾನಕೋ. ೬೬).
">
ನಿಮ್ಮ ತಾಯಿಯ ಸುಖದುಃಖಗಳ ದ್ರಷ್ಟಾರರು ನೀವಾಗುತ್ತಿದ್ದರೆ ನಾನು ತಿರ್ಯಾಹಿತ ಯಾಕೆ ನಿಮ್ಮೆದುರಿಗೆ ಉಪಸ್ಥಿತ ಆಗುತ್ತಿದ್ದೆ
ತಿರ್ಯಾಹಿತರ ಹಾಗ ಮಾತಾಡಬ್ಯಾಡ
[←ಮರಾ. ತಿರಾಯುತ, ತಿರ್ಹಾಈತ]
೧. ತಿರುಗು; ಸುತ್ತಾಡು; ಸುತ್ತು:
ಕೆಲವು ಕಾಲದಿಂಬೞೆಕ್ಕೆ ಸತ್ತು ತಾನುಂ ಮಕ್ಕಳುಂ ಸಂಸಾರದೊಳ್ ತಿರಿಯು[ಪಾಠಾಂ. ರುಗು] ತ್ತಿರ್ದರ್
ಜಯಾಸ್ತ್ರಮನುರ್ಚಿಕೊಂಡು ಭೋಂಕೆನೆ ದೊಣೆಯಿಂ ಶರಾಸನದೊಳಂತದನಾಗಡೆ ಪೂಡಿ ಧಾತ್ರಿ ತಿೞ್ಹನೆ ತಿರಿವನ್ನೆಗಂ ತೆಗೆದು
ಎನಿತಂ ಸಂಸಾರದೊಳಗೆ ತಿೞ್ಹನೆ ತಿರಿವೈ
ಗಾಣದೆತ್ತು ಮೆಟ್ಟಿದುದನೆ ಮೆಟ್ಟಿ ಕೂಡೆ ತಿರಿವಂದದೊಳೀ ತ್ರಿಜಗಂಗಳೊಳ್ತೊೞಲ್ದುದು
ವಿಪಿನಾಂತರದೊಳಗೆ ತೊಳಲಿದೆವು ತಿರಿದೆವು ಹೊರೆದೆವೊಡಲುಗಳ
೨. ತಿರುಪೆ ಎತ್ತು; ಭಿಕ್ಷೆ ಬೇಡು; ಯಾಚಿಸು:
ತಾವಿರ್ಬರುಂ ತಿರಿದು ತಂ [ಪಾಠಾಂ. ತಿರಿತು] ದಿಕ್ಕಿದೆಂಜಲೆವುೞುಮಂ ತಿಂದು