logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-4

Please click here to read PDF file Kannada Nighantu by Kannada Sahitya Parishattu : Vol-4

ತಿರಸ್ಕರಿಸು
ತಥಾಗತಮತಮಂ ತಿರಸ್ಕರಿಸಿ ತನ್ನೊಳಶಕ್ಯಾನುಷ್ಠಾನಕ್ಕೆ ಪೊಣರ್ದ ಲೋಕಾಯತಶಾಕ್ಯಮತಾವಲಂಬಿಯನವಿಲಂಬಿತಂ ಗೆಲ್ದು
(ಶಾಂತಿಪು. ೮-೧೪೭ ವ);

ತಿರಸ್ಕರಿಸು
ಮತಿಗೆಟ್ಟು ಬಾಯ್ಗೆ ವಂದಂತೆ ತಿರಸ್ಕರಿಸುವುದು ಪುರುಷಾಕಾರಮೆ ಗುರುವಂ
(ಸುಕುಮಾ. ೨-೬೭).
[ತಿರಸ್ಕರಣ + - ಇಸು3]

ತಿರಸ್ಕಾರ
(ನಾ). =
ತಿರಸ್ಕರಣ:
ಅವರ ರೀತಿ ಅನೇಕ ಶಿಕ್ಷಕರಲ್ಲಿ ತಿರಸ್ಕಾರವನ್ನೇ ತಂದಿತು
(ರಂಗರೋ. ೫೨);

ತಿರಸ್ಕಾರ
ಪ್ರಾಚೀನ ಸಂಪ್ರದಾಯ ಪಾಲಿಸಿದ ಭಾರತೀಯರಿಗೆ ಸಮಾಜದಲ್ಲಿ ತಿರಸ್ಕಾರ, ಸರ್ಕಾರದಲ್ಲಿ ನಕಾರ, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧಿಕ್ಕಾರ
(ಋಕ್ಸಾರ. ೧೧೫ ಪೀಠಿಕೆ);

ತಿರಸ್ಕಾರ
ನಮಸ್ಕಾರ ಇದ್ದಲ್ಲಿ ತಿರಸ್ಕಾರ ಇದ್ದೀತು
(ಗಾದೆ).
[ಸಂ.]

ತಿರಸ್ಕೃತ
(ಗು).
೧. ಧಿಕ್ಕಾರಕ್ಕೊಳಗಾದ; ಹೀಯಾಳಿಕೆಗೆ ಗುರಿಯಾದ:
ಸಿಂಗರಿಸಿ ಬಂದಡರ್ದಂ ಜಯರವದೊಳಾ ಸುಧನ್ವಂ ತಿರಸ್ಕೃತ ಕುಸುಮ ಧನ್ವನು
(ಜೈಮಿಭಾ. ೧೨-೪).

ತಿರಸ್ಕೃತ
೨. ಮರೆಮಾಡಿದ; ಮುಚ್ಚಿದ.

ತಿರಸ್ಕೃತ
೩. ನಿರಾಕರಿಸಿದ; ಅಸ್ವೀಕೃತ.

ತಿರಸ್ಕೃತ
(ನಾ).
೪. ಧಿಕ್ಕಾರಕೊಳ್ಳಗಾದುದು; ಹೀಯಾಳಿಕೆಗೆ ಗುರಿಯಾದುದು:
೧೯ನೆಯ ಶತಮಾನದ ಅಂತ್ಯದೊಳಗೆ ಭಾರತೀಯ ಸಂಸ್ಕೃತಿ ಪೂರ್ಣವಾಗಿ ತಿರಸ್ಕೃತವಾದ ವಿಷಯವಾಯಿತು
(ಋಕ್ಸಾರ. ೧೧೫ ಪೀಠಿಕೆ).
[ಸಂ.]

ತಿರಸ್ಕೃತಿ
(ನಾ). =
ತಿರಸ್ಕರಣ:
ತನಗೆ ಪೇಳ್ದುದನಾಲಿಸಿದನಾ ತ್ರಿಕೂಟ ಲಂಕಾಧಿಪಂ ಕಟುತಿರಸ್ಕೃತಿ ಗದೆಯ ಘಾತಕ್ಕೆ ಕಣ್ಮುಚ್ಚಿದನ್
ಶ್ರೀರಾಮಾ. ೪೯೪-೨೩೧).
[ಸಂ]


logo