Kannada Nighantu by Kannada Sahitya Parishattu : Vol-2
ಪುರುಷೋತ‍್ತಮ[ನೆ]ಱೆಯೆ ಬಙ್ಕೆಯಂ ಕಂಕಾಳಗೊರವರ ಕಾಲಂ ಕರ್ಚ್ಚಿ
(ಇಎ. ೧೯೪೬, ಹಾನಗಲ್. ೨೦೭-೮ ; 859).
ಎಲುಬಿನಿಂದ ಮಾಡಿದ ದಂಡ, __ಕೋಲು; ಅಸ‍್ಥಿದಂಡ:
ಹರಿಯ ಕಂಕಾಳದಂಡವ ಪಿಡಿದವರ್ ಪಂಚಮುಖರು ನಯನತ‍್ರಿತಯರು
ಶಿವಂಗೆ ಕಂಕಾಳಾಂಕಪಾಣಿಗೆ ಶಂಕರತ‍್ವದ ಕಿಂಕರರು ಸರಿಯೇ
[ಕಂಕಾಳ (= ಕಂಕಾಲ) + ಅಂಕ2 + ಪಾಣಿ2].
ಬರಿಯೆಲ್ ಬೇಱೆರ್ದ ಕಂಕಾಳಿಕೆ ಪೆಡತಲೆಯೊಳ್ ಪೊಕ‍್ಕ ಕಣ್ ತೋರ್ಪಕೆಯ‍್ಕಾಲ‍್ಸೆರೆ . . . ಚಿದ‍್ರೂಪಕ‍್ಕೆ ಪಕ‍್ಕಾಗಿರೆ ಚರಿಗೆಗುಣಲ‍್ಬಂದನೊರ್ವಂ ಮುನೀಂದ‍್ರಂ
೧. ಕಾಳು ಉದುರಿಸಿ ಉಳಿದ ತೆನೆ:
ಮೇಟಿಯ ಸುತ‍್ತಲೂ ದನಗಳು ತಿರುಗಾಡಿದಂತೆ ಅವುಗಳ ಕಾಲ‍್ತುಳಿತಕ‍್ಕೆ ತೆನೆಗಳು ಕಂಕಿಯಾಗುತ‍್ತಿದ‍್ದವು
ಹಂತಿಯ ಹೊಡೆಯುತ ಕಂಕಿಯ ತೆಗೆಯುತ ತಣಿವರು ರೈತರು
ಸುಂಕರಾಶಿಯ ಕಣಕೆ ಸಂಕದೇವನ ಬಲವು ಕಂಕಿಯಾ ಕಣಕೆ ನಿನಬಲವು ಮಾದೇವಿ ಸೋಂಕಿದರೆ ರಾಶಿ ಕಣತುಂಬಿ
೨. (ಬತ‍್ತ ಮೊದಲಾದುವುಗಳ ಮೇಲಿನ) ಊಬು; “ಕಾಳಿನ ಮೇಲಿನ ಊಬು” (ಸರ್ವಜ‍್ಞ. ಕೋಶ):
ಸುಂಕಿಗನು ಹುರಿಹಲ‍್ಲು ಬಿಂಕದ ಬೆಲೆವೆಣ‍್ಣು ಕಂಕಿಯು ಸುಂಕ ನಸುಗುನ‍್ನಿ ಇವು ಆಱು ಸೋಂಕಿದರೆ ಬಿಡವು