Kannada Nighantu by Kannada Sahitya Parishattu : Vol-4
೨. ಧಿಕ್ಕರಿಸುವ; ಮೀರುವ; ಅತಿಕ್ರಮಿಸುವ:
ಭೀಮವಿಕ್ರಮ ಸಿಂಧುರಮನಭಿರಾಮದಾನಗಜೇಶನಂ ಸುತ್ರಾಮದಂತಾವಳ ತಿರಸ್ಕರ ದಂತಿಯಂ ತನ್ನಿ
ಕಡೆಗಣಿಸುವಿಕೆ; ಅವಹೇಳನ; ಅಪಮಾನಗೊಳಿಸುವಿಕೆ; ತಾತ್ಸಾರ:
ಎನ್ನೊಡನೇಕೆ ನಿನ್ನ ಮತಿ ನಿನ್ನ ಮದಾಂಧತೆ… ನಿನ್ನ ಬಗೆ ನಿನ್ನ ತಿರಸ್ಕರಣಂ ಬೃಹಸ್ಪತೀ
ತೆರೆಯ ಮಱೆಯಲಿ ಸಮರ್ಪಿಸಿದ ಧೂಪಾರತಿಯನಿರಿಸಲ್ತದಂಗಾರ ಸಂಸ್ಪರ್ಶನದಿ ತಿರಸ್ಕರಣಿ ಬೇವುತ್ತಿರಲ್ಕೆ
ತಿರಸ್ಕರಣಿಯು ನಿಶ್ಯಬ್ದವಾಗಿ ಮುಂದೆ ಸರಿದು… ಒಂದು ಕೋಣೆಯನ್ನು ಮಾಡಿತು
೨. ಅದೃಶ್ಯತೆಯನ್ನುಂಟು ಮಾಡುವ ಮಾಯಾಶಕ್ತಿಯುಳ್ಳ ಮೇಲ್ಮುಸುಕು:
ಎಲಾ ತಿರಸ್ಕರಿಣೀ ಗರ್ವಿತನೆ, ನನ್ನ ಅಸ್ತ್ರವು ನಿನ್ನನ್ನು ಕಾಣುವುದು
ಇತರರ ಕಣ್ಣಿಗೆ ಬೀಳದಂತೆ ಮರೆಯಾಗಬಹುದಾದ ಒಂದು ವಿದ್ಯೆ; ಅದೃಶ್ಯವಾದ ವಿದ್ಯೆ:
ಈ ಉದ್ಯಾನ ಪಾಲಿನಿಯರ ಪಾರ್ಶ್ವದಲ್ಲಿ ತಿರಸ್ಕರಿಣೀ ವಿದ್ಯೆಯಿಂದ ಒಬ್ಬರಿಗೂ ಕಾಣಿಸದಂತೆ ಇದ್ದುಕೊಂಡು ನೋಡುವೆನು
`ತಿರಸ್ಕರಿಣಿಕಾಖ್ಯೆ ಜವನಿಕೆಯಕ್ಕುಂ`
ಕಡೆಗಣಿಸು; ಧಿಕ್ಕರಿಸು; ಅವಹೇಳನಮಾಡು:
ಮಹಾಋಷಿಯರಂ ನಿಮಗೆ ಪೞೆಯಲುಂ ಬಯ್ಯಲುಂ ತಿರಸ್ಕರಿಸಿ ನುಡಿಯಲುಮಕ್ಕುಮೆ