logo
भारतवाणी
bharatavani  
logo
ಭಾರತೀಯ ಭಾಷೆಗಳ ಮೂಲಕ ಜ್ಞಾನ
Bharatavani

Kannada Nighantu by Kannada Sahitya Parishattu : Vol-2

Please click here to read PDF file Kannada Nighantu by Kannada Sahitya Parishattu : Vol-2

ಕಂಕಾಲ
(ನಾ).
ಇಂದುಧರ ಕಂಕಾಳಮಂ ಧರಿಸಿದಾ ಕಥೆಯ ಕೇಳಿ
(ಲಶಿಚಿಂ. ೭ ಸೂಚನೆ);

ಕಂಕಾಲ
(ನಾ).
ಸುಟ‍್ಟು ಕರಿಯಾಗಿದ‍್ದ ಅರ್ವರ ಕಂಕಾಳಗಳು ಕಣ‍್ಣಿಗೆ ಬಿದ‍್ದುವು
(ಭೀಷ‍್ಮಚ. ೭೪).
[ಸಂ.]

ಕಂಕಾಲತೆ
(ನಾ).
ಕಂಕಾಲವಾಗಿರುವಿಕೆ; ಅಸ‍್ಥಿಪಂಜರದ ಸ‍್ಥಿತಿ:
ತೊವಲ್ ಪತ‍್ತಿ ಬಿಗಿದೆಲ‍್ವುಗೂಡಿನ ಶಿಥಿಲ ಕಂಕಾಲತೆಯ
(ಶ‍್ರೀರಾಮಾ. ೨೧-೫೪೭);

ಕಂಕಾಲತೆ
(ನಾ).
ಬರದ ಗರ ಬಡಿದಿರ್ದ ಕಲ್‍ಕೊರಕು ಕಂಕಾಲತೆಯ ಮಲೆಯ ತೊರೆ ತಾನಲ‍್ಲಲ‍್ಲಿ ತುಂಡುತುಂಡಾಗಿ ತಂಗಿದುದು
(ಶ‍್ರೀರಾಮಾ. ೩೪೦--೧೪).
[ಸಂ. ಕಂಕಾಲತಾ]

ಕಂಕಾಲಧರ
(ನಾ).
ಎಲುಬಿನ ಮಾಲೆಯನ‍್ನು ಧರಿಸಿದವನು; ಶಿವ (ಕಿ).
[ಸಂ.]

ಕಂಕಾಲಮಾಲಿ
(ನಾ).
= ಕಂಕಾಲಧರ (ಕಿ).
[<ಸಂ. ಕಂಕಾಲಮಾಲಿನ್]

ಕಂಕಾಲಿ
ಕಂಕಾಳಿ
(ನಾ).
೧. ಶಿವ. ೨. ಶಿವನ ಸೇವಕರಲ‍್ಲಿ ಒಬ‍್ಬ; ಶಿವನ ಆಸ‍್ಥಾನದಲ‍್ಲಿರುವ ವೇತ‍್ರಧರರಲ‍್ಲಿ ಒಬ‍್ಬ. ಕಂಕಾಳಿ:
೨. ಪೊಂಬೆತ‍್ತಮನೆತ‍್ತಿ ಹೋ ಸಾರ್ ತೊಲಗೆಂದು ನಿವಾರಿಸಿ ಸಮುಚಿತ ಸ‍್ಥಾನದೊಳಿಂಬುಕೆಯ‍್ಸುವ ಭೀಮ ಕಂಕಾಳಿಗಳೆಂಬ [ಪಾಠಾಂ. ಕಂಕಾಳರೆಂಬ] ವೇತ‍್ರಧರರಿಂ
(ಶಬಶಂ. ೧-೭೯ ವ).

ಕಂಕಾಲಿ
ಕಂಕಾಳಿ
(ನಾ).
೩. ರುದ‍್ರಾಣಿಯರಲ‍್ಲಿ ಒಬ‍್ಬಳು:
ಧುರದೊಳಗೆ ಕಾಮಾಕ‍್ಷಿ ಚಾಮುಂಡಿ ಕಂಕಾಳಿಯರು ಭೂತಗಣಸಹಿತ ರುಧಿರದೋಕುಳಿಯನಾಸುರದೊಳೊಲಿದಾಡುವಾಗಲು
(ಸೋಮಚ. ೫-೫೮);

ಕಂಕಾಲಿ
ಕಂಕಾಳಿ
(ನಾ).
ಹೋಳೆರಡ ಬೀಸಾಡೆ ರಣದಲಿ ಕಾಳಿ ಕಂಕಾಳಿಯರು ದಣಿದರು
(ಕೌಶಿರಾ. ೨೦-೩೪).
[< ಸಂ. ಕಂಕಾಲಿನ್]

ಕಂಕಾಳ
‘ಕಂಕಾಲ’ ನೋ.


logo