Kannada Nighantu by Kannada Sahitya Parishattu : Vol-2
೩. ಒಳ‍್ಳೊಳ‍್ಳೆಯ ಗಾದೆಗಳನ‍್ನು ಚೆನ‍್ನಾಗಿ ಬಲ‍್ಲವನು; “ನಲ‍್ಗಾದೆಗಾಱ” (ಚತುನಿ. ಕಿ. I, ೪೩).
ಗಟ‍್ಟಿಯಾಗಿ ಕೂಗು; ದೊಡ‍್ಡ ಶಬ‍್ದಮಾಡು; ಬೊಬ‍್ಬೆಮಾಡು:
ಕೂಗುತಿಹ ಕಹಳೆಗಳು ಖಡಿಖಡಿತಾಗು ತಾಗೆಂದೊದರ್ವ ತಂಬಟಗಾರರಿಂ ಬಲವೆರಡು ಕಂಕಾರಿಸುತ ರಣಮುಖಕೆ
ವೀರಕೋಡುಗಳುಡುಗಿ ತುರುವಾಕಾರವಾದವರೊಂದಿನಲಿ ಕಂಕಾರಿಸುತ ನಡಸಿದರು ಕೌರವನಾಳು ಗೋಗಣವ
ನೀರ ಮಧ‍್ಯದ ಪುರದ ಹಯ ಕಾಲೂರಿ ನಿಲ‍್ಲದೆ ಕುಣಿವುತಿರೆ ಕಂಕಾರಿಸುವ ಜೋಧರನೀಕ‍್ಷಿಸಿ
ಒತ‍್ತಿ ಕಂಖಾರಿಸುತೆ ಕಿತ‍್ತ ಕತ‍್ತಿಯ ಭಲ‍್ಯ ಮೊದಲಾದ ಕೈಯಸ‍್ತ‍್ರವ
ಅಡಿಗಟ‍್ಟು ಕಂಖಾರಿಸುತ ಕುಲಿಕುಲಿನಾಲ ಮೊರೆಯುತಲಿ
[ಕಂಕರ0 + -ಇಸು3. / ಮರಾ. ಖಂಕಾರಣೇ = ಗಂಟಲನ‍್ನು ಸರಿಪಡಿಸಿಕೊಳ‍್ಳು]
೧. ಅಸ‍್ಥಿಪಂಜರ; ಎಲುಬಿನ ಗೂಡು:
ತೋಲಂ ಬಾಸಣಿಸಿದ ಕಂಕಾಲಮೆ ದಲ್ ಜೀವದಿರ್ಕೆಯೆನಲಾಗದು
ಕಂಕಾಲ ಭೀಕರಮದಂ ಕಂಡು ಸೌಮಿತ‍್ರಿ
೨. [ಸಂಗೀತ] ಸಂಗೀತದ ಒಂದು ಪದ‍್ಧತಿ. ೩. ಒಬ‍್ಬ ರಾಕ‍್ಷಸನ ಹೆಸರು. ಕಂಕಾಳ:
೧. ಬ‍್ರಹ‍್ಮಕಪಾಲ ವಿಷ‍್ಣು ಕಂಕಾಳವನಿಕ‍್ಕಿ ಆಡುವಲ‍್ಲಿ ನೀಲಕಂಠನೆಂಬಾತನೊಬ‍್ಬ ಗಣೇಶ‍್ವರನು
ಆ ಮುನಿಯ ಕಂಕಾಳದಲಿ ಸುತ‍್ರಾಮ ಕೊಂದನು ವೃತ‍್ರನನು