logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಜ
[ನಾ] ಆದಿಜಿನ (ನಿಜಮಕುಟಮಣಿಮರೀಚಿಯಿಂ ಅಜನ ಪದಾಂಬುಜದ ಕೆಂಪನಿರ್ಮಡಿಸಿ ಕುಲಧ್ವಜ ಬೆಸಸು ನಿನ್ನವೊಲೀ ಪ್ರಜಾಪತಿತ್ವಕ್ಕೆ ಮುನ್ನ ನೋಂತರುಮೊಳರೇ: ಆದಿಪು, ೮. ೬೩); [ನಾ] ಆಡು, ಮೇಕೆ (ಹರಿತಾಂಕುರ ಪಲ್ಲವ ಪತ್ರರಾಜಿಯಂ ಬಿಸುಟು ಶುಷ್ಕಪತ್ರಂಗಳನಾದರದಿಂ ಮೇವ ಅಜಕುಳಮಂ: ಆದಿಪು, ೧೫. ೩೫); [ನಾ] ಬ್ರಹ್ಮ (ಕೊಂದೆನ್ನ ಮಗನಂ ಇಂ ಭಯದಿಂದಂ ರಸೆವೊಕ್ಕುಂ ಅಜನ ಗುಂಡಿಗೆವೊಕ್ಕುಂ ಮಂದರಧರನ ಈ ಪೊರ್ಕುೞ ಪೊಂದಾವರೆವೊಕ್ಕು ಮೇಣವಂ ಬರ್ದುಕುವನೇ: ಪಂಪಭಾ, ೧೧. ೧೨೧); [ನಾ] ಹುಟ್ಟಿಲ್ಲದವನು, ಕೃಷ್ಣ (ಜಯದ್ರಥಂ ಇಕ್ಕುೞಿದು ಆರೊಳಂ ತೊಡಂಕವೇಡ ಎನುತುಂ ಅಜಂ ಮರುಜ್ಜವದೆ ಚೋದಿಸೆ: ಪಂಪಭಾ, ೧೧. ೧೪೫)

ಅಜಕುಕ್ಷಿ
[ನಾ] ಆಡಿನ ಹೊಟ್ಟೆಯಂತೆ ತೆಳ್ಳಗಿನ ಹೊಟ್ಟೆಯಿರುವ [ಆನೆ] (ಮಹಾವ್ಯೂಢೋರಸ್ಕನುಂ ವಿಪುಳೋಪಚಿಂತಾಂಸನುಂ ಸಮಪಾರ್ಶ್ವನುಂ ಅಜಕುಕ್ಷಿಯುಂ ಗೋಧೋತ್ರಿಷ್ಟನುಂ: ಆದಿಪು, ೧೨. ೫೬ ವ)

ಅಜಗರ
[ನಾ] ಹೆಬ್ಬಾವು (ಅವಧಿಜ್ಞಾನಿಗಳಂ ಕಂಡು ಅಜಗರ ವೃತ್ತಾಂತಮಂ ಬೆಸಗೊಂಡು: ಆದಿಪು, ೨. ೧೫ ವ)

ಅಜನಿಸು
[ಕ್ರಿ] ಕೀಳ್ಮಾಡು, ತಿರಸ್ಕರಿಸು (ಎನ್ನಿಂದ ಅಜನಿಸಿ ನುಡಿಯಿಸಿದುವು ಅಹಿಧ್ವಜನೋವದೆ ಮುನ್ನೆ ನೆಗೞ್ದ ದುಶ್ಚರಿತಂಗಳ್: ಪಂಪಭಾ, ೯. ೨೧)

ಅಜಮುಖವ್ಯಾಘ್ರ
[ನಾ] ಮೇಕೆ ಮುಖದ ಹುಲಿ, ಕಪಟಿ (ಈತಂ ಅಜಮುಖವ್ಯಾಘ್ರಂ ಶ್ವೇತಕೃಷ್ಣಕಾರಕಂ ಈತನ ಮಾತು ಮಾತಲ್ಲ: ಪಂಪಭಾ, ೫. ೭೨ ವ)

ಅಜರ
[ನಾ] ನಿರ್ಜರ, ಕೃಷ್ಣ (ಅದು ವಿಲಯಾದ್ರಿಯ ಕಿಡಿಗಳನುಗುೞುತ್ತುಮೆಯ್ದೆವರ್ಪುದುಮಿದಿರಂ ನಡೆದ ಅಜರಂ ಉರದಿನಾಂತೊಡೆ: ಪಂಪಭಾ, ೧೧, ೭೭); [ನಾ] ದೇವತೆ (ಸುರಿವ ಅಜರಪ್ರಸೂನರಜದಿಂ ಕವಿಲಾದ ಶಿರೋರುಹಂ: ಪಂಪಭಾ, ೧೨. ೨೨೧)

ಅಜಸ್ರ
[ಅ] ಸದಾ, ಸತತ (ಪ್ರಚಣ್ಡವಿಕ್ಷೋತ್ಪಾತಪ್ರಶಮನ ಶಾನ್ತ್ಯುದಕ ಧಾರಾಕಾರ ತತ್ಕ್ಷಣಕ್ಷರತ್ ಅಜಸ್ರ ದಾನಪ್ರಮೋದಜಳ ಧಾರಾಭಿರಾಮ ಕರಟಿಘಟಾಚಕ್ರನುಂ: ಆದಿಪು, ೧೪. ೯೧ ವ)

ಅಜಾಂಡ
[ನಾ] ಬ್ರಹ್ಮಾಂಡ (ಪುೞುವಾನಸನೆಂಬಂ ಅಜಾಂಡಮೆಂಬ ಅತ್ತಿಯ ಪಣ್ಣೊಳಿರ್ಪ ಪುೞುವಲ್ಲದೆ ಮಾನಸನೇ: ಪಂಪಭಾ, ೫. ೭೫)

ಅಜಾಂಡತಟ
[ನಾ] ಬ್ರಹ್ಮಾಂಡದ ಮೇರೆ (ಮದವದ್ದಂತಿಗಳಂ ಕಱುತ್ತು ಅಸಗವೊಯ್ವೊಯ್ದು ಆಜಿಯೊಳ್ ಭೀಮಂ ಆರ್ದು ಒದೆದು ಈಡಾಡಿದೊಡೆ ಅತ್ತ ಅಜಾಂಡತಟಮಂ ತಾಪನ್ನೆಗಂ: ಪಂಪಭಾ, ೧೧. ೬೭)

ಅಜಾತ
[ನಾ] ಹುಟ್ಟಿಲ್ಲದವನು, ಕೃಷ್ಣ (ನಿಜಮತಮನೆನಗೆ ಮೀಱಲ್ಕಜಾತ ದೊರೆಯಲ್ಲಂ: ಪಂಪಭಾ, ೯. ೨೧)


logo