logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಗ್ರಮಹಿಷಿ
[ನಾ] ಪಟ್ಟದ ರಾಣಿ (ತನ್ನಗ್ರಮಹಿಷಿಯ ಮನಮನಾಱೆ ನುಡಿದು ಪಂಡಿತೆಯಂ .. .. ಮನಂಗೆಲ್ವುದೆಂದು ನಿಯೋಜಿಸಿ ಪೋದಂ: ಆದಿಪು, ೩. ೨೬ ವ)

ಅಗ್ರಸೂನು
[ನಾ] ಹಿರಿಯ ಮಗ (ಅವರ್ಗೆ ಅಗ್ರಸೂನು ಸಂಪತ್ಪತಿ ವಜ್ರಜಂಘಂ ಎನೆ ತಲ್ಲಿತಾಂಗನೆ ಬಂದು ಪುಟ್ಟಿದಂ: ಆದಿಪು, ೩. ೯)

ಅಗ್ರಹಸ್ತ
[ನಾ] ತುದಿ (ಘನಸಾರ ಸರಳಚಂದನವನ ಮೃದುಪಲ್ಲವಮಂ ಅಗ್ರಹಸ್ತದೆ ಕೊಂಡೊಯ್ಯನೆ ಬೀಸೆ ಚೆಲ್ವುವಡೆದದು ಜಿನಂಗೆ ಚಾಮರವಿಕ್ಕುವಂತಮರಗಜಂ: ಆದಿಪು, ೭. ೭೧)

ಅಗ್ರಹಾರ
[ನಾ] ಬ್ರಾಹಣರ ವಾಸಸ್ಥಳ (ಮಹಾಗ್ರಹಾರಂಗಳ ಮಹಾಜನಂಗಳ ಕೊಟ್ಟ ಪೊನ್ನ ಜನ್ನಿವಿರಂಗಳಂ ಪರಕೆಯುಮಂ ಕೆಯ್ಕೊಳುತ್ತುಂ: ಪಂಪಭಾ, ೨. ೯೭ ವ)

ಅಘ
[ನಾ] ಪಾಪ (ಸುಧರ್ಮಮುನಿಪದ್ಮಕ್ಕೆಱಗಿ ಜಿನರೂಪಮೆಂಬೊಂದಱ ಅಡಿವಿಡಿದು ಅಘಬಲಮನಲೆದು ಶಿಲೆಯೊಳ್ ಪೊಯ್ದಂ: ಆದಿಪು, ೩. ೫೧

ಅಘಟಂ
[ನಾ] ಅಸಾಂಗತ್ಯ, ಹೊಂದಾಣಿಕೆಯಿಲ್ಲದ್ದು (ನುಡಿವೊಡೆ ರಾಜಕಾರ್ಯನಯಮೆತ್ತ ಅಬಲಾಜನದ ಬುದ್ಧಿಯೆತ್ತ ಉಡುಪತಿವಂಶ ನೋಡುವೊಡೆ ಇದೊಂದಘಟಂ: ಪಂಪಭಾ, ೭. ೪೫)

ಅಘಟಮಾನ
[ಗು] ಹೊಂದುವುದಲ್ಲದ (ನಿನ್ನೆಂದಂತುಟೆ ಮೋಕ್ಷಕ್ಕೆನ್ನಿರ್ಪಿರವು ಅಘಟಮಾನವೈಹಿಕದ ತೋಡರ್ಪು ಎನ್ನಿರವಿನೊಳುಂಟಱಿಪದೆ ನಿನ್ನಂ ಪುಸಿಯಾಡಿ: ಪಂಪಭಾ. ೮. ೪)

ಅಘಟಿತಘಟಿತಂ
[ನಾ] ಆಗಬಾರದ್ದು ಆಗುವುದು (ಎತ್ತ ವನಂ ಎತ್ತ ಮೃಗಯಾವೃತ್ತಕಂ ಈ ತಪಸಿಯೆತ್ತ ಮೃಗಂ ಎಂದು ಎಂತು ಆನೆತ್ತಚ್ಚೆನ್ ಆತ್ಮಕರ್ಮಾಯತ್ತಂ ಪೆಱತಲ್ತಿದು ಎಲ್ಲಂ ಅಘಟಿತಘಟಿತಂ: ಪಂಪಭಾ, ೧. ೧೧೩)

ಅಘನ
[ನಾ] ಘನವಲ್ಲದ್ದು, ದೃಢವಲ್ಲದ್ದು (ಘನಾಘನದಿಂದಂ ಅಱಿಯಲಾದುದು ಘನಾಘನಂ ಜವನ ದಾೞಿಗಿಲ್ಲೆಂಬಿನಿತಂ: ಆದಿಪು, ೪. ೬೫)

ಅಘಮರ್ಷಣಪೂರ್ವಕಂ
[ಕ್ರಿವಿ] ಪಾಪನಿವಾರಕ ಮಂತ್ರೋಚ್ಚಾರದಿಂದ (ಅಂತು ಚಾಗಂಗೆಯ್ದು ಜಗನ್ಮಂಗಳ ಗಂಗಾವಾರಿಯೊಳ್ ಅನಿವಾರಿತಪರಾಕ್ರಮಂ ಅಘಮರ್ಷಣಪೂರ್ವಕಂ ಮಿಂದು: ಪಂಪಭಾ, ೯. ೭೨ ವ)


logo