logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಗ್ಗಳಿಕೆ
[ನಾ] ಅತಿಶಯ, ಮಹಿಮೆ (ಆ ಸಂಖ್ಯೆಯೊಳ್ ತಾತ್ಪರ್ಯಗೆಯ್ವನ್ನವೆಂಬ ಅಗ್ಗಳಿಕೆಯಿಂ ಎಸೆದತ್ತು ಏಕರಜ್ಜುಪ್ರಮಾಣಂ ತಿರ್ಯಗ್ಲೋಕಂ: ಆದಿಪು, ೧. ೪೮)

ಅಗ್ಗಳಿಕ್ಕೆ
[ನಾ] ಅಗ್ಗಳಿಕೆ (ನಿಜಾನುಜರ್ ನೆರಪಿದೊಂದೈಶ್ವರ್ಯದಿಂ ರಾಜಸೂಯಮಂ ಇಂದು ಅಗ್ಗಳಿಕ್ಕೆಯ ಮಖಂ ತಾನೆಂಬಿನಂ: ಪಂಪಭಾ, ೬. ೬೬)

ಅಗ್ಗಳಿಸು
[ಕ್ರಿ] ಹರಡಿಕೊ (ಮಲರ್ದಲರ್ದ ನಾಗಸಂಪಗೆಯಲರ್ಗಗೊಳ್ ಅಗ್ಗಳಿಸಿ ಬಿರಿವ ಪೊಂಬಾೞೆಯ ಪೊಸಗಂಪಿನೊಳ್: ಆದಿಪು, ೧. ೬೮); [ಕ್ರಿ] ಮೀರಿಸು (ಅಳವಿನೊಳ್ ಎನ್ನುಮಂ ಇನಿಸಗ್ಗಳಿಸಿದ ಹರಿಗನೊಳ್ ಇದಿರ್ಚಿ ಕರ್ಣಂ ಗೆಲಲ್ ಉಮ್ಮಳಿಪಂ ಗಡ: ಪಂಪಭಾ, ೧೨. ೧೪೪); [ಕ್ರಿ] ಹೆಚ್ಚಾಗು (ಬೆಳಗುವ ಸೊಡರ್ಗಳ ಬೆಳಗು ಅಗ್ಗಳಿಸುವವೋಲ್ ಪೋಪ ಪೊೞ್ತಱೊಳ್ ತೇಜಂ ಪಜ್ಜಳಿಸೆ: ಪಂಪಭಾ, ೧೨. ೨೧೦)

ಅಗ್ನಿ
[ನಾ] ಬೆಂಕಿ (ಶಸ್ತ್ರ ಪಾಷಾಣ ಆತಪ ವರ್ಷ ವಿಷ ಅಗ್ನಿ ಕಾಷ್ಠ ಕಂಟಕ ತ್ರಿದೋಷಸಂಭವಾಮಯ ಜರಾದಿ ಬಾಧಾವಿದೂರನುಂ: ಆದಿಪು, ೮. ೪ ವ) [ಬಸವರಾಜು ಮತ್ತು ನರಸಿಂಹಶಾಸ್ತ್ರಿ ಅವರ ಆವೃತ್ತಿಗಳಲ್ಲಿ]

ಅಗ್ನಿಕಾರ್ಯ
[ನಾ] ಹೋಮಹವನಗಳು (ಚಾರು ವಿವಿಧಾಗ್ನಿಕಾರ್ಯ ಮಹಾದ್ವಿಜನ್ಮಘೋಷದಿಂ ಅಂಹೋದೂರಮುಮಂ ಅವನಿತಳಾಳಂಕಾರಂ ಸಂಸಾರಸಾರಂ ಗಂಗಾದ್ವಾರಂ: ಪಂಪಭಾ, ೪. ೧೫)

ಅಗ್ನಿತ್ರಯ
[ನಾ] ಮೂರು ಬಗೆಯ ಬೆಂಕಿಗಳು: ಆಹವನೀಯ, ಗಾರ್ಹಪತ್ಯ ಮತ್ತು ದಕ್ಷಿಣ (ಶರೀರ ಸಂಸ್ಕಾರಾದಿ ಗಾರ್ಹಪತ್ಯ ದಕ್ಷಿಣಾಗ್ನ್ಯಾಹವನೀಯಮೆಂಬ ಪೆಸರಂ ಪಡೆದ ಅಗ್ನಿತ್ರಯಂಗಳೊಳ್: ಆದಿಪು, ೧೫. ಅ೬ ವ)

ಅಗ್ನಿಪರಿಚಾರಕ
[ನಾ] ಅಗ್ನಿಯ ಸೇವೆ ಮಾಡುವ ಒಬ್ಬ ಪುರೋಹಿತ (ವ್ಯಾಸ ಕಶ್ಯಪ ವಿಶ್ವಾಮಿತ್ರ ಭರದ್ವಾಜ ಬ್ರಹ್ಮ ಅಧ್ವರ್ಯು ಅಗ್ನೀಧ್ರ ಮೈತ್ರಾವರುಣ ಅಗ್ನಿಪರಿಚಾರಕ: ಪಂಪಭಾ, ೬. ೩೩ ವ)

ಅಗ್ನಿಮುಖಾಸ್ತ್ರ
[ನಾ] ಬೆಂಕಿಯುಗುಳುವ ಬಾಣ (ತಮದೊಡ್ಡಿರ್ಪವೊಲಿರ್ಪ ಕಾರ್ಮುಗಿಲ ತಳ್ತೊಡ್ಡೆಲ್ಲಮಂ ಮುನ್ನಂ ಅಗ್ನಿಮುಖಾಸ್ತ್ರಂಗಳಿನೆಚ್ಚು ತೂಳ್ದು: ಆದಿಪು, ೧೩. ೬೧)

ಆಗ್ನಿಶರೀರೆ
[ನಾ] ಅಗ್ನಿಪ್ರವೇಶ ಮಾಡಿ ಕಿಚ್ಚಿಗರ್ಪಿಸಿದ ದೇಹವುಳ್ಳವಳು (ಅಂಬೆಯೆಂಬ ದಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಂ ಅಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ: ಪಂಪಭಾ, ೧. ೮೦ ವ)

ಅಗ್ನಿಸಂಧಾನ
[ನಾ] ಬೆಂಕಿಯನ್ನು ಹೊತ್ತಿಸುವುದು (ಮೂಱುಂ ಕೊಂಡಂಗಳೊಳ್ ಉತ್ತರವೇದಿಯೊಳಗೆ ಅಗ್ನಿಸಂಧಾನಂಗೆಯ್ದು: ಪಂಪಭಾ, ೬. ೩೩ ವ)


logo