logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಗುರ್ವುಗೊಳ್
[ಕ್ರಿ] ಹೆದರು (ಷಟ್ಖಂಡಭೂಮಂಡಳಂ ನಿಮಿರ್ದಾಜ್ಞಾಪ್ರಸರಕ್ಕಗುರ್ವುಗೊಳೆಯುಂ: ಆದಿಪು, ೧೫. ೪)

ಅಗುಳ್
[ನಾ] ಅನ್ನದ ಅಗುಳು (ಕುಕ್ಕುೞಗುದಿವಲ್ಲಿ ಕೂೞ್ಗುದಿಯೆ ಮೇಗೆ ಸಿಡಿಲ್ದ ಅಗುಳಂತೆ: ಪಂಪಭಾ, ೧೧. ೧೫೩)

ಅಗುೞ್
[ನಾ] [ಕುಳಿ] ಅಗೆ (ಮನೆಗೆ ತಂದು ರಾಧೆಯೆಂಬ ತನ್ನ ನಲ್ಲಳ ಸೋಂಕಿನೊಳ್ ಕೂಸನಿಟ್ಟೊಡೆ ರಾಗಿಸಿ ಸುತನ ಸೂತಕಮಂ ಕೊಂಡಾಡೆ ಅಗುೞ್ದಿರಲ್: ಪಂಪಭಾ, ೧. ೯೬ ವ ಮತ್ತು ೧. ೯೭); [ಕ್ರಿ] ತೋಡು (ಘನಾಘನನಿನಾದದಿಂ ಬೃಂಹಿತಂಗೆಯ್ವ ವಿಜಯಗಜಮಂ ನೆಲನಂ ಪೊಕ್ಕಡಂಗಿದ ಪಗೆವರಂ ಅಗುೞ್ದು ಕೊಲ್ವುದಂ ಉದಾಹರಿಸುವಂತೆ: ಪಂಪಭಾ, ೯. ೯೫ ವ)

ಅಗೆ
[ನಾ] ಮೊಳಕೆ, ಅಂಕುರ (ತಾರಗೆಗಳ್ ಅಗೆಗಳಂತಿರೆ ತಾರಾಪಥದೊಳ್ ನಿರಂತರಂ ತುಱುಗಿರೆ: ಆದಿಪು, ೬. ೫೪)

ಅಗೇಂದ್ರ
[ನಾ] ಪರ್ವತಶ್ರೇಷ್ಠ (ನೀಳ್ಪಿಂ ಪರ್ವಿ ಪೂರ್ವಾಪg ಜಳಧಿಗಳಂ ಮುಟ್ಟಿ ನಿಂದತ್ತಗೇಂದ್ರಂ: ಆದಿಪು, ೯. ೧೧೫)

ಅಗ್ಗ
[ನಾ] ಶ್ರೇಷ್ಠ (ನಿಮ್ಮೊಳಗ್ಗದ ಪರಶುಧರಂ ಪೊಣರ್ದು ತಾನದಂದೇನಾದಂ: ಪಂಪಭಾ, ೧೦. ೭)

ಅಗ್ಗಲ
[ಗು] ಅಧಿಕ, ಅತಿಶಯ (ಮೈಮೆಯ ಮಾನಸಿಕ್ಕೆ ಅಗ್ಗಲದ ಪೊಗೞ್ತೆ ತನ್ನದೆನೆ ಪೆಂಪು ಮನೋಹರಿಗಲ್ಲದಕ್ಕುಮೇ: ಆದಿಪು, ೧. ೭೨)

ಅಗ್ಗಲಿಸು
[ಕ್ರಿ] ಅಧಿಕವಾಗು (ತನಗೆ ಅಗ್ಗಲಿಸಿದಲಂಪಂ ಕುಡೆ ಪೊಸತಲರ್ದಂಕುರಿಸಿರ್ದ ಕಲ್ಪಲತೆಯನೆ ಪೋಲ್ತಳ್: ಆದಿಪು, ೭. ೪೭); [ಕ್ರಿ] ಹೆಚ್ಚಾಗು (ಭೂರುಹಂ ಕುಸುಮಶೋಭೆಯೊಳ್ ಅಗ್ಗಲಿಸಿರ್ದವೊಲ್ ಮನೋಹರಮೆನಿಸಿತ್ತು: ಆದಿಪು, ೮. ೪); [ಕ್ರಿ] ವ್ಯಾಪಿಸು (ಅಗ್ಗಳದ ವೈಷ್ಣವಮೋಹಮೆ ನಿನ್ನೊಳ್ ಅಗ್ಗಲಿಸಿದುದಕ್ಕುಂ: ಪಂಪಭಾ, ೯. ೪೪); [ಕ್ರಿ] ಪ್ರಬಲವಾಗು (ಕುಲಜರಂ ಉದ್ಧತರಂ ಭುಜಬಲಯುತರಂ ಹಿತರಂ ಈ ಸಭಾಮಧ್ಯದೊಳ್ ಅಗ್ಗಲಿಸಿದ ಮದದಿಂ ನಾಲಗೆ ಕುಲಮಂ ತುಬ್ಬುವವೊಲ್ ಉಱದೆ ನೀಂ ಕೆಡೆನುಡಿವೈ: ಪಂಪಭಾ, ೧೦. ೨೦);

ಅಗ್ಗಳಂ
[ಗು] ಮಿಗಿಲು (ಎಮಗಂ ಎಮಗಪ್ಪ ಭಾಗದ ಸಮಕಟ್ಟಂ ದೇವ ಕುಡಲೆವೇೞ್ಪುದು ನಂಟರ್ ನಿಮಗೆ ಎಮ್ಮಿಂದ ಅಗ್ಗಳಮಾರ್: ಆದಿಪು, ೯. ೯೯); [ನಾ] ಮೀರಿದವನು (ಭುವನಗುರುಗೆಱಗಿದರಂತೆ ಅನಿಬರುಂ ಅವಱಿಂದ ಅಗ್ಗಳಮೆನೆ ನೆಗೞ್ದಾ ಬಾಹುಬಲಿಯಂ ಎಂತೆಱಗಿಸುವೆಂ: ಆದಿಪು, ೧೪. ೪೧); [ನಾ] ಹೆಚ್ಚು (ಒಡ್ಡಮಂ ಪೇೞಿಂ ಎನೆ ಪೊೞ್ತುಪೋಗಿಂಗಂ ಅೞ್ತಿಗಂ ಆಡುವ ತಮ್ಮುತಿರ್ವರ ಪಲಗೆಗೆ ಸಾಯಿರ ಗದ್ಯಾಣದ ಪೊನ್ನೆ ಸಾಲ್ಗುಂ ಅಗ್ಗಳಂ ಬೇಡ: ಪಂಪಭಾ, ೬, ೭೧ ವ)

ಅಗ್ಗಳಗಣ್
[ನಾ] ಹೆಚ್ಚಾದ [ಮೂರನೆಯ] ಕಣ್ಣು, ವಿಶೇಷ ದೃಷ್ಟಿ (ತೋಱಿದನೆಱಕದೆ ಹರಿಗಂಗೆ ರುದ್ರಂ ಅಗ್ಗಳಗಣ್ಣಂ: ಪಂಪಭಾ, ೮. ೨೩)


logo