logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಖಂಡಿತಂ
[ಗು] ಕತ್ತರಿಸದ, ಪೂರ್ಣವಾದ (ಏನಖಂಡಿತಮೋ ಶೌರ್ಯಗುಣೋನ್ನತಿ ರಾಜರಾಜನಾ: ಪಂಪಭಾ, ೧೩. ೬೫)

ಅಖಂಡಿತಮತಿ
[ನಾ] ಮಹಾಬುದ್ಧಿವಂತೆ (ಅನ್ನೆಗಂ ಇತ್ತಲುಂ ಅಖಂಡಿತಮತಿ ಪಂಡಿತೆಯುಂ ತನ್ನ ಪೂಣ್ದು ಪೋದ ಕಜ್ಜಮಂ ಸಾಧ್ಯಂಮಾಡಿ: ಆದಿಪು, ೩. ೮೪ ವ)

ಅಖಲ್ಯ
[ನಾ] ಅಪ್ರಯೋಜಕ (ಶಲ್ಯಂ ಅಂದು ಅಖಲ್ಯನಂ ಬಗೆವವೊಲ್ ಏಳಿದಂ ಬಗೆದು ದಂತಿಯನಾಗಡೆ ತೋಱಿಕೊಟ್ಟು: ಪಂಪಭಾ, ೧೦ ೧೧೧)

ಅಖಿಳರ್ಧಿ
[ನಾ] [ಅಖಿಳ+ಋದ್ಧಿ] ಎಲ್ಲ ಋದ್ಧಿಗಳು; ತಪಸ್ಸಿನಿಂದ ಪ್ರಾಪ್ತವಾಗುವ ಬುದ್ಧಿ, ತಪ, ಔಷಧ, ರಸ, ಬಲ, ಜ್ಞಾನ ಚಾರಣ ಎಂಬ ಏಳು ಮಹಿಮೆಗಳು (ವಿಸ್ರಸ್ತಬಹಳದೋಷತ ಮಿಸ್ರರಂ ಅಖಿಳರ್ಧಿಗುಣ ವಿಭೂಷಣರಂ ಪುಣ್ಯಾಸ್ರವ ಕಾರಣರಂ ಪಿಹಿತಾಸ್ರವ ಮುನಿಪತಿಗಳಂ ಮನಂ ಬಿಡೆ ಕಂಡೆಂ ಆದಿಪು, ೩. ೩೬)

ಅಖಿಳಾಗಮವಿತ್ತ್ವ
[ನಾ] [ಜೈನ] ಎಲ್ಲ ಶಾಸ್ತ್ರಗಳ ಪರಿಣತೆ (ಮಿತನಖಕೇಶಶೋಭಿತ ತನುತ್ವಂ ಅಭುಕ್ತ್ಯುಪಸರ್ಗಭಾವಂ ಅನ್ವಿತಚತುರಾನನತ್ವಂ ಅಖಿಳಾಗಮವಿತ್ತ್ವಂ: ಆದಿಪು, ೧೦. ೪೩)

ಅಗ
[ನಾ] ಬೆಟ್ಟ (ಪಿಡಿದ ಗದೆಗಳನಿಳಿಪಂತಾದುದು ಸುಯೋಧನ ಉಗ್ರವೃಕೋದರರ್ ಒರ್ಮೊದಲೆ ಶಿಖರಮುಳ್ಳ ಎರಡು ಅಗಮಂ: ಪಂಪಭಾ, ೨. ೭೨)

ಅಗಣ್ಯ
[ಗು] ಲೆಕ್ಕವಿಲ್ಲದಷ್ಟು (ಒಂದು ದಿವಸಂ ಉಪವಾಸಮಿರ್ದು ಅಗಣ್ಯಪುಣ್ಯತೀರ್ಥಂಗಳಂ ಮಿಂದು: ಪಂಪಭಾ, ೧. ೧೩೬ ವ); ಅಪಾರವಾದ (ಪಲ್ಲಂ ಸುಲಿದು ಅಗಣ್ಯಪುಣ್ಯ ತೀರ್ಥೋದಕಂಗಳಂ ಮಿಂದು ಮಂಗಳವಸದನಂಗೊಂಡು: ಪಂಪಭಾ, ೧೦. ೪೬ ವ)

ಅಗಪಡು
[ಕ್ರಿ] ಸಿಕ್ಕಿಹಾಕಿಕೊ (ನರನೊಳ್ ಮುನ್ನ ಅಗಪಟ್ಟುದೊಂದೞಲೊಳಾಂ ಕೈಲಾಸಶೈಳೇಶನಂ ಪಿರಿದುಂ ಭಕ್ತಿಯೊಳರ್ಚಿಸುತ್ತುಮಿರೆ: ಪಂಪಭಾ, ೧೧. ೯೮)

ಅಗರು
[ನಾ] ಸುಗಂಧ, ಸುಗಂಧದ ಮರ (ಅಗರುವ ಮೆಚ್ಚು ಅಚ್ಚ ಸಿರಿಕಂಡದೊಳಗ್ಗಲಿಸಿತ್ತು ಬಸಂತಮಾಸದೊಳ್: ಪಂಪಭಾ, ೫. ೩೦)

ಅಗಲ್
[ನಾ] ಊಟದ ಬಟ್ಟಲು (ಲವಲವಿಕೆಯಂ ಪರಿಯಣಮಂ ಬಿತ್ತರಿಸಲುಂ ಪದ್ಮಿಕೆಯಂ ಅಗಲಂ ತಂದು ಮುಂದಿರಿಸಲುಂ: ಆದಿಪು, ೭. ೨೧ ವ); [ಕ್ರಿ] ಅಗಲವಾಗು (ಇದು ನಿನ್ನೀ ಅಗಲ್ದುರದೊಳ್ ಪೊದಳ್ದು ತನತೊಂದು ಜನ್ಮಮಂ ಸಫಳಂ ಮಾೞ್ಪುದು: ಆದಿಪು, ೧೨. ೧೧೯); [ಕ್ರಿ] ದೂರ ಹೋಗು (ದುಶ್ಶಾಸನನಂ ಕಂಡು ಆತನಂ ಸುತ್ತಿಱಿದ ಮುದುವರ್ದುಗಳುಮಂ ಅಗಲೆ ಮೆಟ್ಟಿ: ಪಂಪಭಾ, ೧೩. ೫೬ ವ)


logo